ನ್ಯಾಷನಲ್ ಐಕಾನ್ ಮಾಡೆಲ್ ಹಂಟ್- ಕೊಯ್ಯೂರಿನ ಸೃಷ್ಟಿಗೆ ಪ್ರಶಸ್ತಿ

ಕೊಯ್ಯೂರು: ಇತ್ತೀಚೆಗೆ ತಿಬ್ಬಾಸ್ ಗ್ರೂಪ್ ಪೌಂಡೇಶನ್ ಮೈಸೂರು ನೇತೃತ್ವದಲ್ಲಿ ಮೈಸೂರಿನಲ್ಲಿ ನಡೆದ ನ್ಯಾಷನಲ್ ಐಕಾನ್ ಮಾಡೆಲ್ ಹಂಟ್-2019 ಸ್ಪರ್ಧೆಯ ಟೀನ್ ವಿಭಾಗದಲ್ಲಿ ಕೊಯ್ಯೂರಿನ ಸೃಷ್ಟಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಸ್ಪರ್ಧೆಯು ಒಟ್ಟು ನಾಲ್ಕು ವಿಭಾಗದಲ್ಲಿ ನಡೆದಿದ್ದು, ಒಟ್ಟು 114 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಪ್ರತಿ ವಿಭಾಗದಲ್ಲೂ ಇಬ್ಬರನ್ನು ಆಯ್ಕೆ ಮಾಡಲಾಗಿದ್ದು, ಬೆಳ್ತಂಗಡಿಯ ಕೊಯ್ಯೂರಿನ ಸೃಷ್ಠಿ ಟೀನ್ ಆಗಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಸಂದರ್ಭ ಸಂಸ್ಥೆಯ ಸಂಸ್ಥಾಪಕ ಡಿ.ಸಿ ನಾಗೇಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.