ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ವಾರ್ಷಿಕ ಮಹಾಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  ಉಜಿರೆ: ಇಲ್ಲಿನ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಇದರ 2019ನೇ ಸಾಲಿನ ವಾರ್ಷಿಕ ಸಮಾವೇಶವು ಆ.4 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು.
ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಹಾಗೂ ವಾಣಿ ಸಹಕಾರಿ ಸಂಘದ ಅಧ್ಯಕ್ಷ ಹೆಚ್. ಪದ್ಮಗೌಡ ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಇಂದಿನ ಕಾರ್ಯಕ್ರಮದಲ್ಲಿ ಇಬ್ಬರು ಯೋಧರನ್ನು ಗೌರವಿಸುವುದು ಹೆಮ್ಮೆಯ ವಿಚಾರ. ನೂತನವಾಗಿ ಪ್ರಾರಂಭಗೊಂಡ ವಾಣಿ ಸಹಕಾರಿ ಸಂಘದ ಬೆಳವಣಿಯ ಬಗ್ಗೆ ವಿವರಿಸಿದರು ಹಾಗೂ ಸಂಘದ ಅಭಿವೃದ್ಧಿಗೆ ಸಹಕರಿಸಿದವರನ್ನು ಸ್ಮರಿಸಿದರು.

ಸುಳ್ಯ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ಯುವ ವೇದಿಕೆ ಅಧ್ಯಕ್ಷ, ನ್ಯಾಯವಾದಿ  ದಿನೇಶ್ ಮಡಪ್ಪಾಡಿ ಮಾತನಾಡಿ ಸಮಾಜದಲ್ಲಿ ಶಿಕ್ಷಣದಿಂದ ವಂಚಿತರಾದರೆ ಮನೆಯ ಒಂದು ದೀಪ ಆರಿದ ಹಾಗೇ, ಅದಕ್ಕಾಗಿ ಮಕ್ಕಳಿಗೆ ವಿದ್ಯೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಇತ್ತೀಚೆಗೆ ನಮ್ಮ ಸಮಾಜ ಬಾಂಧವರು ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇದು ಹೆಮ್ಮೆಯ ವಿಚಾರ. ಉಜಿರೆ ಗ್ರಾಮ ಸಮಿತಿಯ ಮಹಾಸಭೆಯು ತಾಲೂಕು ಹಾಗೂ ಜಿಲ್ಲಾ ಸಮಾವೇಶವನ್ನು ಮೀರಿ ನಡೆದಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಗೌಡ ಜಾತಿಯಲ್ಲಿ ಬರುವ ಹಲವು ಕಟ್ಟು-ಪಾಡು, ಸಂಸ್ಕೃತಿಗಳಿವೆ ಇವೆಲ್ಲವೂ ಜೀವನಕ್ಕೆ  ಭದ್ರ ಬುನಾದಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಗೌಡ ಅಪ್ರಮೇಯ ಮಾತನಾಡಿ ಉಜಿರೆಯಲ್ಲಿ ಈಗ ಸುಮಾರು 280ರಷ್ಟು ಸಮಾಜ ಬಾಂಧವರ ಮನೆಗಳಿವೆ. ಸಮಾಜ ಬಾಂಧವರನ್ನು ಸಂಘಟಿಸುವ ದೃಷ್ಟಿಯಿಂದ ವಿನೂತನವಾದ ಮನೆಯಂಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದು ಯಶಸ್ವಿಯಾಗಿದೆ. ಮುಂದೆ ಉಜಿರೆ ಗ್ರಾಮ ಸಮಿತಿಯ ವತಿಯಿಂದ ಗೌಡರ ಮಾಹಿತಿ ಕೈಪಿಡಿ ಹೊರತರಲಿದ್ದೇವೆ. ಮುಂದಿನ ಮಹಾಸಭೆಯ ಒಳಗೆ ವಾಣಿ ಸಹಕಾರಿ ಸಂಘಕ್ಕೆ ರೂ. 10ಲಕ್ಷ ಠೇವಣಿ ಸಂಗ್ರಹ ನೀಡುವ ಬಗ್ಗೆ ಭರವಸೆಯನ್ನು ನೀಡಿದರು. ವೇದಿಕೆಯಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಅಧ್ಯಕ್ಷ ಜಿ. ಸೋಮೆಗೌಡ, ತಾ| ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾ ನಾರಾಯಣ ಗೌಡ ದೇವಸ್ಯ, ತಾ| ಯುವ ವೇದಿಕೆ ಅಧ್ಯಕ್ಷ ಯಶವಂತ ಗೌಡ ಬನಂದೂರು ಉಪಸ್ಥಿತರಿದ್ದರು. ಕೆ. ವಿಟ್ಲ ಮತ್ತು ತಂಡ ದೀಪಾವಳಿ ಆಚರಣೆಯ ನೆನಪುಗಳ ದೃಶ್ಯಾವಳಿಗಳೊಂದಿಗೆ ಮೆರವಣಿಗೆ ಹಾಗೂ ಅತಿಥಿಗಳನ್ನು ಸ್ವಾಗತಿಸಿ ಉದ್ಘಾಟನೆ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳು, ಉಪಾಧ್ಯಕ್ಷ ದೇವಪ್ಪ ಗೌಡ, ಜೊತೆ ಕಾರ್ಯದರ್ಶಿ ಉಮೇಶ್, ಯುವ ವೇದಿಕೆ ಅಧ್ಯಕ್ಷ ಉಮೇಶ್ ಗೌಡ, ಯುವ ವೇದಿಕೆ ಕಾರ್ಯದರ್ಶಿ ಶೈಲೇಶ್ ಧರಣಿ , ಉಪನ್ಯಾಸಕ ಆನಂದ ಗೌಡ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಲಕ್ಷ್ಮಣ ಮತ್ತು ನಯನ್ ಕುಮಾರ್ ಯೋಧರ ಸನ್ಮಾನ ಪರಿಚಯವನ್ನು ಸಮಿತಿಯ ಉಪಾಧ್ಯಕ್ಷೆ ಚೇತನಾ ಹರಿಶ್ಚಂದ್ರ ವಾಚಿಸಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಿಕ್ಷಕ ಬಾಲಕೃಷ್ಣ ಕೊರಮೇರು ನಡೆಸಿಕೊಟ್ಟರು. ಶಾಲಾಮಕ್ಕಳಿಗೆ ಏರ್ಪಡಿಸಿದ್ದ ಆಟೋಟ ಸ್ಪರ್ಧೆಯ ವಿಜೇತರ ಬಹುಮಾನ ವಿತರಣೆಯ ನಿರೂಪಣೆಯನ್ನು ಉಮೇಶ ಶಿವಾಜಿನಗರ ನಿರ್ವಹಿಸಿದರು. 2018-19 ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಧರಣಿ ಧರ್ಣಪ್ಪ ವಾಚಿಸಿದರು. 2018-19ನೇ ಸಾಲಿನ ಲೆಕ್ಕ ಪತ್ರವನ್ನು ಸಂಘದ ಕೋಶಾಧಿಕಾರಿ ರಮೇಶ್ ಪೈಲಾರ್ ಮಂಡಿಸಿದರು. ಲಕ್ಷ್ಮಣ ಗೌಡ ಮತ್ತು ನಯನ್ ಕುಮಾರ್ ಸೇನಾ ಸೇವೆಯ ಮತ್ತು ಸನ್ಮಾನದ ಅನುಭವವನ್ನು ಹಂಚಿಕೊಂಡರು. ಸಂಘದ ಸದಸ್ಯ ಶೇಖರಗೌಡ ಸ್ವಾಗತಿಸಿದರು. ರಿತಿಕಾ ಮತ್ತು ದೀಕ್ಷಾ ಪ್ರಾರ್ಥನೆ ಹಾಡಿದರು. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇಂದ್ರ ಹಾಗೂ ಶಿಕ್ಷಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿ, ಗೋಪಾಲಕೃಷ್ಣ ಜಿ.ಕೆ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.