ಬಳಂಜ : ಗ್ರಾಮೀಣ ಅಂಚೆ  ಪಾಲಕ ಬಿ.ಪ್ರಮೋದ್ ಕುಮಾರ್ ವೃತ್ತಿಯಿಂದ ನಿವೃತ್ತಿ

ಬಳಂಜ : ಕಳೆದ 35 ವರ್ಷಗಳಿಂದ ಬಳಂಜ-ನಾಲ್ಕೂರು ಗ್ರಾಮದ ಗ್ರಾಮೀಣ ಅಂಚೆ -ಪಾಲಕರಾಗಿ ಪ್ರಮಾಣಿಕ ಸೇವೆ ಸಲ್ಲಿಸಿ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾಲ್ಗೊಂಡ ಬಿ.ಪ್ರಮೋದ್ ಕುಮಾರ್‌ರವರು ಆ. 3ರಂದು ವೃತ್ತಿಯಿಂದ ನಿವೃತ್ತಿ ಹೊಂದಿದರು.
ಬಳಂಜ ಗ್ರಾಮದ ಹೊಸಮನೆ ನಿವಾಸಿ ಬಿ. ಪ್ರಮೋದ್ ಕುಮಾರ್‌ರವರು 1984ರಲ್ಲಿ ಕರ್ತವ್ಯಗೆ ಹಾಜರಾಗಿ ಇಲಾಕೇತರ ನೌಕರನಾಗಿ, ಶಾಖಾ ಅಂಚೆ ಪಾಲಕರಾಗಿ, ಇಲಾಖೇತರ ನೌಕರ ತಾಲೂಕು ಮಟ್ಟದ ಸಂಘಟನೆಯ ಪ್ರಥಮ ಅಧ್ಯಕ್ಷರಾಗಿ, ಪುತ್ತೂರು ವಲಯದ  AIPEU ಸಂಘನೆಯ ಕಾರ್ಯಕಾರಿ ಸದಸ್ಯನಾಗಿ, ಕರ್ನಾಟಕ ವಲಯ ಇಲಾಖೇತರ ನೌಕರರ ಸಂಘಟನೆಯ ಉಪಾಧ್ಯಕ್ಷರಾಗಿ, ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಪುತ್ತೂರು ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಸಾರ್ವಜನಿಕ ರಂಗದಲ್ಲಿ ತನ್ನನ್ನು ನಾನು ಸಕ್ರಿಯವಾಗಿ ತೊಡಗಿಸಿಕೊಂಡು ಹಲವಾರು ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಬಳಂಜ ಗ್ರಾ.ಪಂ ನ ಉಪಾಧ್ಯಕ್ಷರಾಗಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಪತ್ನಿ ಪ್ರಮೀಳಾ, 2 ಮಕ್ಕಳಾದ ವಿಭಾ ಬಿ. ಜೈನ್, ಬಿ. ಅಭಿಜಿತ್ ಜೈನ್‌ರೊಂದಿಗೆ ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.