ಪಟ್ರಮೆ: ನಿಡ್ಲೆ ಗ್ರಾಮದವರಾಗಿದ್ದು ಪ್ರಸ್ತುತ ಭಾರತೀಯ ವಾಯುಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾಸ್ಕರ್ ಭಟ್ ಅವರು ಪಟ್ರಮೆ ಸರಕಾರಿ ಶಾಲೆಯಲ್ಲಿ 25 ಬಾದಾಮಿ ಗಿಡಗಳನ್ನು ತನ್ನ ಪ್ರಾಯೋಜಕತ್ವದಲ್ಲಿ ನೆಡುವ ಮೂಲಕ ವಿಶೇಷ ರೀತಿಯಲ್ಲಿ ವನಮಹೋತ್ಸವಕ್ಕೆ ಸಾಕ್ಷಿಯಾದರು. ಅರಣ್ಯ ಇಲಾಖೆ ಮತ್ತು ಎಸ್ಡಿಎಂಸಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು.
ಕಾರ್ಯಕ್ರಮ ಪ್ರಯುಕ್ತ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನೂ ನೆ ಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಅರಣ್ಯ ಇಲಾಖೆಯ ಅಧಿಕಾರಿ ಲೋಕೇಶ್ ಉದ್ಘಾಟಿಸಿದರು.
ಗ್ರಾ.ಪಂ. ಸದಸ್ಯ ಶ್ಯಾಮರಾಜ್, ಅರಣ್ಯ ಇಲಾಖೆಯ ವತಿಯಿಂದ ಪ್ರತಾಪ್, ವಿನಯಚಂದ್ರ, ರಾಜೇಶ್, ಮುದರ, ಶಾಲಾ ಮುಖ್ಯ ಗುರುಗಳಾದ ಶ್ರೀಧರ್ ಕೆ.ಎಸ್, ಸಹ ಶಿಕ್ಷಕರಾದ ಪ್ರಸಾದ್, ಗೌರವ ಶಿಕ್ಷಕಿ ಕು.ಸುರೇಖ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಯತೀಶ್ ಗೌಡ, ಹಾಗೂ ಸಮಿತಿ ಸದಸ್ಯರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಹಾಗೂ ಸಮಿತಿ ಸದಸ್ಯರು, ಶಾಲಾ ಮಕ್ಕಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.