ವೇಣೂರು ಚರ್ಚ್ : ವನಸಂರಕ್ಷಣೆ ಕಾರ್ಯಕ್ರಮ

Advt_NewsUnder_1
Advt_NewsUnder_1

ವೇಣೂರು: ಪಶ್ಚಿಮ ಘಟ್ಟ ಹಾಗೂ ಮಲೆನಾಡು ಪ್ರದೇಶದಲ್ಲಿ ಹಲವಾರು ಬಗೆಯ ಔಷಧೀಯ ಗುಣದ ಸಸ್ಯಗಳು ಇವೆ. ಆದರೆ ಇಂದು ಅತಿಕ್ರಮಣ ಮತ್ತು ದುರಾಸೆಯಿಂದ ಈ ಸಸ್ಯ ಕಾಶಿ ನಾಶವಾಗುತಿದ್ದು ಈ ನಿಟ್ಟಿನಲ್ಲಿ ಸಮಾಜ ಜಾಗೃತವಾಗಬೇಕಿದೆ ಎಂದು ವೇಣೂರು ವಲಯ ಅರಣ್ಯ ಅಧಿಕಾರಿ ಪ್ರಶಾಂತ್ ಕುಮಾರ್ ಪೈ ಕರೆ ನೀಡಿದರು.
ವೇಣೂರು ಕ್ರಿಸ್ತರಾಜ ದೇವಾಲಯದಲ್ಲಿ ಭಾರತೀಯ ಕಥೋಲಿಕ್ ಯುವ ಸಂಚಲನ ಘಟಕ (ಐಸಿವೈಎಂ) ಹಾಗೂ ಕಥೋಲಿಕ್ ಸಭಾ ಆಯೋಜಿಸಿದ ವನಸಂರಕ್ಷಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಚರ್ಚಿನ ಧರ್ಮಗುರು ವಂ| ಪೀಟರ್ ಆರನ್ಹಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ವೇಣೂರು ಗಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಚರ್ಚ್ ಪಾಲನಾ ಪರಿಷತ್ ಉಪಾಧ್ಯಕ್ಷ ರೊನಾಲ್ಡ್ ಡಿಸೋಜ, ಕಥೋಲಿಕ್ ಸಭಾ ಸ್ಥಾಪಕ ಅಧ್ಯಕ್ಷ ಎಲ್.ಜೆ. ಫೆರ್ನಾಂಡಿಸ್, ಕಥೋಲಿಕ್ ಸಭಾ ಅಧ್ಯಕ್ಷ ಎಡ್ವರ್ಡ್ ರೇಗೋ, ಐಸಿವೈಎಂ ಸಚೇತಕರುಗಳಾದ ಭ| ವಿಲ್ಮಾಡೇಸಾ, ಅರುಣ್ ಡಿಸೋಜ, ಅಧ್ಯಕ್ಷೆ ನಿನೆಟ್ ಮೋರಸ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಚರ್ಚ್ ಪಾಲನಾ ಪರಿಷತ್ ಕಾರ್ಯದರ್ಶಿ ಸ್ಟೀವನ್ ಡಿಕುನ್ಹ ಸ್ವಾಗತಿಸಿ, ಮಾಜಿ ಸಚೇತಕ ಅನೂಪ್ ಜೆ. ಪಾಯಸ್ ವಂದಿಸಿದರು. ಐಸಿವೈಎಂ ಯುವ ಪ್ರತಿನಿಧಿ ರೋನ್ಸನ್ ಟೆಲ್ಲಿಸ್ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.