HomePage_Banner_
HomePage_Banner_
HomePage_Banner_

ಶಿರ್ಲಾಲು: ಪ್ರಭಾರ ಮುಖ್ಯಶಿಕ್ಷಕ ಕೃಷ್ಣಪ್ಪ ಪೂಜಾರಿಯವರ ಬೀಳ್ಕೊಡುಗೆ

Advt_NewsUnder_1

ಶಿರ್ಲಾಲು: ಇಲ್ಲಿಯ ಶಿರ್ಲಾಲು ಸ.ಉ.ಪ್ರಾ.ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ವರ್ಗಾವಣೆ ಹೊಂದಿದ ಕೃಷ್ಣಪ್ಪ ಪೂಜಾರಿಯವರಿಗೆ ಬೀಳ್ಕೊಡುಗೆ ಸಮಾರಂಭವು ಪಾಲಕ-ಪೋಷಕರ ಹಾಗೂ ಶಿಕ್ಷಕ ವೃಂದದವರ ಸಹಕಾರದೊಂದಿಗೆ ನಡೆಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ ಕುಲಾಲ್, ನಾಮನಿರ್ದೇಶಿತ ಸದಸ್ಯ ಧರ್ಣಪ್ಪ ಪೂಜಾರಿ, ಉಪಾಧ್ಯಕ್ಷೆ ಸುಮಿತ್ರಾ, ಧರ್ಣಪ್ಪ ಪೂಜಾರಿ, ಕರಂಬಾರು ಶಾಲೆಯ ಮುಖ್ಯಶಿಕ್ಷಕ ರಮೇಶ ಚೌಹಾನ್ ಹಾಗೂ ಪ್ರಭಾರ ಮುಖ್ಯಶಿಕ್ಷಕಿ ರಾಜೇಶ್ವರಿ ಬಿ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಹಾಗೂ ಶಿಕ್ಷಕರ ವತಿಯಿಂದ ಕೃಷ್ಣಪ್ಪ ಪೂಜಾರಿಯವರಿಗೆ ಚಿನ್ನದ ಉಂಗುರ ತೊಡಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಸುಷ್ಮಾ ಕಾರ್ಯಕ್ರಮ ನಿರೂಪಿಸಿ, ಸರೋಜಿನಿ ಎಂ ವಂದಿಸಿ, ಮೋಂತಿ ಮೋರಾಸ್, ಶಾಲೆಟ್ ಕ್ರಾಸ್ತಾ, ಸದಾಶಿವ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.