HomePage_Banner_
HomePage_Banner_

ಎಸ್.ಡಿ.ಎಂ. ಸಿ.ಬಿ.ಎಸ್.ಇ. ಶಾಲೆಯಲ್ಲಿ ವಸ್ತುಪ್ರದರ್ಶನ

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ(ಸಿ.ಬಿ.ಎಸ್.ಇ.),ಉಜಿರೆ ಇಲ್ಲಿಯ ಸಾಂಸ್ಕೃತಿಕ ಸಂಘ ಕಲಾ ಸಿಂಧು ಇದರ ಆಶ್ರಯದಲ್ಲಿ ಆಟಿ ತಿಂಗಳ ಪ್ರಯುಕ್ತ ಶಾಲೆಯಲ್ಲಿ ಪುರಾತನ ವಸ್ತುಗಳ ವಸ್ತುಪ್ರದರ್ಶನವನ್ನು ಆಯೋಜಿಸಲಾಯಿತು.

ಶಾಲಾ ಪ್ರಾಂಶುಪಾಲ ಮನಮೋಹನ್ ನಾಯ್ಕ್ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ, ‘ ನಮ್ಮ ಹಿರಿಯರ ಆದರ್ಶ ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು. ‘ಕಲಾಸಿಂಧು’ ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ವಸ್ತುಗಳ ಮಹತ್ವ ಮತ್ತು ವಿಶೇಷತೆಯನ್ನು ತಿಳಿಸಿದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಘದ ಸಂಯೋಜಕ ಶಿಕ್ಷಕರಾದಹರೀಶ್ ಬಳಂಜ ಮತ್ತು ಶ್ರೀಮತಿ ಸುಮಾ ಶ್ರೀನಾಥ್ ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.