ಬೆಳ್ತಂಗಡಿಯಲ್ಲಿ ಕಲಾಸಿಲ್ಕ್ ಕಾಟನ್ ಎಕ್ಸ್‌ಪೋ :ಹ್ಯಾಂಡ್‌ಲೂಂ, ಹ್ಯಾಂಡಿಕ್ರಾಫ್ಟ್ ಪ್ರದರ್ಶನ, ಮಾರಾಟ 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಸಮಾಜ ಮಂದಿರ ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ಕಲಾಸಿಲ್ಕ್-ಕಾಟನ್ ಎಕ್ಸ್‌ಪೋ 2019 ಹ್ಯಾಂಡ್ ಲೂಂ ಮತ್ತು ಹ್ಯಾಂಡಿ ಕ್ರಾಫ್ಟ್ ಪ್ರದರ್ಶನ ಮತ್ತು ಮಾರಾಟ ಆ. 1ರಿಂದ ಆರಂಭವಾಗಿದೆ.


ಬೆಳ್ತಂಗಡಿಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರದರ್ಶನ ನಡೆಯುತ್ತಿದ್ದು ಸ್ಪೆಷಲ್ ಆಫರ್ ಶೇ. 65 ದರ ಕಡಿತವನ್ನು ಸಂಘಟಕರು ಘೋಷಿಸಿದ್ದಾರೆ. ಮಾರಾಟವು ಬೆಳಗ್ಗೆ 10ರಿಂದ ರಾತ್ರಿ 9.30ರ ವರೆಗೆ ಇರುತ್ತದೆ.
ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗಿನ 24 ರಾಜ್ಯಗಳ ವಿವಿಧ ವಸ್ತುಗಳ 100ಕೌಂಟರ್‌ಗಳು ಇವೆ. ಆಂಧ್ರ ಪ್ರದೇಶದ ಧರ್ಮಾವರಂ, ವೆಂಕಟಗಿರಿ, ಮಂಗಳಗಿರಿ, ಕಾಲಾಂಕರಿ ಮತ್ತು ಉಪ್ಪಾಡ, ಅಸ್ಸಾಂ ರಾಜ್ಯದ ಮೂಗಾ, ಎರಿ ಸಿಲ್ಕ್ ವಿಹಾರದ ಬಾಗಲ್ಪುರ ಸಿಲ್ಕ್, ಬಿಹಾರದ ಬಾಗಲ್ಪುರ ಸಿಲ್ಕ್, ಟಸ್ಸರ್, ಛತ್ತೀಸ್‌ಗಢದ ಟ್ರಿಬಲ್ ವರ್ಕ್ಸ್ ಕೋಸಾ ಸಿಲ್ಕ್, ಗುಜರಾತ್‌ನ ಬಾಂದನಿ, ಕಚ್ ಎಂಬ್ರಾಯ್ಡಿರಿ ಡ್ರೆಸ್ಸ್ ಮತ್ತು ಸೀರೆಗಳು, ಜಮ್ಮು-ಕಾಶ್ಮೀರದ ಎಂಬ್ರಾಯ್ಡರಿ ಸೀರೆಗಳು, ಡ್ರೆಸ್ ಮೆಟೇರಿಯಲ್, ಪಾಸ್ಮಿನ ಶಾಲ್, ಕರ್ನಾಟಕದ ಕ್ರೇಪ್ ಪ್ರಿಂಟೆಡ್ ಸೀರೆಗಳು, ಮತ್ತು ಡ್ರೆಸ್ ಮೆಟೇರಿಯಲ್, ಮಧ್ಯಪ್ರದೇಶದ ಚಂದೇರಿ ಮತ್ತು ಮಹೇಶ್ವರಿ, ರಾಜಸ್ಥಾನದ ಕೋಟಾ, ಬಾಂದೇಜ್, ಬ್ಲಾಕ್ ಪ್ರಿಂಟ್ಸ್ ಸಂಗ್ನರಿ ಪ್ರಿಂಟ್ಸ್ ಡ್ರೆಸ್ ಮೆಟಿರಿಯಲ್, ತೆಲಂಗಾನದ ಗದ್ವಾಲ, ನಾರಾಯಣಪೇಟೆ, ಪೋಚಂಪಳ್ಳಿ ಉತ್ತರಪ್ರದೇಶದ ಜಮ್ದಾನಿ, ಬನಾರಸ, ಲಕ್ನೋವಿ ಡ್ರೆಸ್ ಮೆಟಿರಿಯಲ್ ಪ. ಬಂಗಾಳದಬಾಲುಚರಿ, ತಂಗಾಯಿ ಕಾಂತ ಇತ್ಯಾದಿಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಕಾಟನ್ ಶರ್ಟ್, ಕಾಟನ್ ಪ್ಯಾಂಟ್, ಜೀನ್, 1000 ವೆರೈಟಿ ಡಿಸೈನ್‌ಗಳಲ್ಲಿ ದೊರೆಯುತ್ತದೆ.

ಹರಿಯಾಣ ಬೆಡ್ ಕವರ್, ಕುಶನ್ ಕವರ್, ಲಕ್ನೋವಿ ಕುರ್ತಿಸ್, ಡ್ರೆಸ್ ಮೆಟೀರಿಯಲ್, ಡೋರ್ ಕರ್ಟನ್ಸ್ ಜೈಪುರಿ ಸ್ಪೋನ್ ಜ್ಯುವೆಲ್ಲರಿ, ಪರ್ಲ್, ವುಡನ್ ಹ್ಯಾಂಡಿಕ್ರಾಫ್ಟ್ ಬಂಜಾರ, ಕೊಲ್ಕತ್ತ ಬ್ಯಾಗ್ಸ್ ಜೈಪುರಿ ರಾಜಿ, ಒರಿಸ್ಸಾ ಪೈಂಟಿಂಗ್ ಹ್ಯಾಂಡಿಕ್ರಾಫ್ಟ್ ಐಟಂಗಳು ಇವೆ ಮಕ್ಕಳ ಡ್ರೆಸ್‌ಗಳ ಪ್ರತ್ಯೇಕ ಕೌಂಟರ್‌ಗಳಿವೆ ಎಂದು ಕಂಪೆನಿಯ ವಕ್ತಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.