ಉಪನ್ಯಾಸಕಿ ವಿಜಯಲಕ್ಷ್ಮೀಯವರಿಗೆಪಿ.ಹೆಚ್.ಡಿ ಪದವಿ

ಬೆಳ್ತಂಗಡಿ: ಉಡುಪಿ ಎಂ.ಜಿ.ಎಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ವಿಜಯಲಕ್ಷ್ಮೀ ಎಂ. ಇವರು ಮಂಡಿಸಿದ `ಎನ್ ಎಕೊನೋಮಿಕ್ಸ್ ಎನಾಲೈಸ್ ಆಫ್ ಹೆಲ್ತ್ ಇನ್ಸೂರೆನ್ಸ್ ಇನ್ ಇಂಡಿಯಾ’ ಎ. ಸ್ಟೋರಿ ಆಫ್ ಉಡುಪಿ ಡಿಸ್ಟ್ರಿಕ್  ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ ಪದವಿ ನೀಡಿ ಪುರಸ್ಕೃರಿಸಿದೆ.
ತುಮಕೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರೊಫೆಸರ್ ಡಾ. ರವೀಂದ್ರ ಕುಮಾರ್ ಬಿ. ಇವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಮಂಡಿಸಿದ್ದರು.
ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆ ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿನಿಯಾಗಿದ್ದು, ಇವರು ಪಿಯುಸಿಯಲ್ಲಿ ರಾಜ್ಯಕ್ಕೆ 5ನೇ ರಾಂಕ್ , ಬಿಎ ಪ್ರಥಮ ರಾಂಕ್ , ಎಂ.ಎ(ಸಂಸ್ಕೃತ) ಪ್ರಥಮ ರಾಂಕ್ , ಎಂ.ಎ(ಎಕೋನೋಮಿಕ್ಸ್) ಪ್ರಥಮ ರ್‍ಯಾಂಕ್‌ನ್ನು ಪಡೆದಿರುತ್ತಾರೆ. ಇವರು ತಾಲೂಕಿನ ನಿವೃತ್ತ ಶಿಕ್ಷಕ ಹರ್ಷನಾರಾಯಣ ಮೂರ್ತಿ ಎಂ. ಹಾಗೂ ಶ್ರೀಮತಿ ಶಾಂತಾ ದಂಪತಿ  ಪುತ್ರಿಯಾಗಿದ್ದಾರೆ .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.