ಉಜಿರೆ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ

ಉಜಿರೆ: ಉಜಿರೆ ಹಾಲು ಉತ್ಪಾದಕರ ಸಹಕಾರ ಸಂಘದ 2018-19 ನೇ ಸಾಲಿನ ವಾರ್ಷಿಕ ಮಹಾಸಭೆ ಜು.31 ರಂದು ಉಜಿರೆ ಶ್ರೀ ಶಾರದಾ ಸಭಾ ಮಂಟಪದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಗೌಡ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ದ.ಕ ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಆದಿತ್ಯರವರು ಮಾತನಾಡುತ್ತಾ ಉತ್ಪಾದಕರಿಂದ ಗ್ರಾಹಕರವರೆಗೆ ಉತ್ತಮ ಬಾಂಧವ್ಯಕ್ಕೆ ಗುಣಮಟ್ಟ ನೀಡಿ ಸಹಕರಿಸಬೇಕು ಎಂದರು. ಸಂಘದ ಉಪಾಧ್ಯಕ್ಷ ವಿಜಯ ಪೂಜಾರಿ, ನಿರ್ದೇಶಕರುಗಳಾದ ನಾರಾಯಣ ಬಂಗೇರ , ಸಂತೋಷ್ ಗೌಡ .ಎಂ, ಸುಬ್ರಹ್ಮಣ್ಯ ಭಟ್, ಅನಿಲ್ ಡಿಸೋಜಾ, ಗೋಪಾಲ ಕೃಷ್ಣ ಬಿ.ಎಸ್, ಕೇಶವಗೌಡ, ನಾಗವೇಣಿ, ವಾರಿಜಾ, ಶಶಿಕಲಾ, ಬೇಬಿ, ಜಯಶ್ರೀ ಪ್ರಕಾಶ್ ಉಪಸ್ಥಿತರಿದ್ದರು.
ಉಜಿರೆ ಪ್ರಾ. ಕೃ.ಪ. ಸಹಕಾರ ಸಂಘದ ಅಧ್ಯಕ್ಷ ಇ. ಸುಂದರ ಗೌಡ, ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಎಂ. ತುಂಗಪ್ಪ ಗೌಡ ಇನ್ನಿತರರು ಹಾಜರಿದ್ದು ಸಲಹೆ ಸೂಚನೆ ನೀಡಿದರು.
ಸಂಘದ ಕಾರ್ಯದರ್ಶಿ ಸೌಮ್ಯಲತಾ ವರದಿ ವಾಚಿಸಿದರು. ನಿರ್ದೇಶಕ ಗೋಪಾಲಕೃಷ್ಣ ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಅಶ್ವಥ್ ವಂದಿಸಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು.
ಪ್ರೋತ್ಸಾಹ ಧನ, ಗೌರವಾರ್ಪಣೆ
ಅತೀ ಹೆಚ್ಚು ಹಾಲು ಒದಗಿಸುತ್ತಿರುವ ನಾರಾಯಣ ಪೂಜಾರಿ, ಕಿಟ್ಟ ಮಾಚಾರು, ರಮೇಶ ಇವರುಗಳನ್ನು ಗೌರವಿಸಲಾಯಿತು. ಸಂಘದ ಸದಸ್ಯರ ಮಕ್ಕಳು, ಶಿಕ್ಷಣದಲ್ಲಿ ಸಾಧನೆ ಗೈದ 13 ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗೌರವ ಧನ ನೀಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.