ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಸಮಗ್ರ ಪ್ರಶಸ್ತಿ

ಬೆಳ್ತಂಗಡಿ: ಉಡುಪಿ ಜಿಲ್ಲೆಯ ಉಪ್ಪುಂದದಲ್ಲಿ ಇತ್ತೀಚೆಗೆ ನಡೆದ ಜೇಸಿರೇಟ್ ಮತ್ತು ಜೇಜೆಸಿ ವಲಯ 15 ರ ಸಮ್ಮೇಳನದಲ್ಲಿ ಜೆಸಿಐ ಬೆಳ್ತಂಗಡಿ ಹಲವು ಕಾರ್ಯಕ್ರಮಗಳಲ್ಲಿ ಪುರಸ್ಕಾರ ಪಡೆದಿದೆ. ಬೆಳ್ತಂಗಡಿ ಘಟಕಕ್ಕೆ ಎಕ್ಸಲೆನ್ಸ್ ಅವಾರ್ಡ್, ಜೆಸಿರೇಟ್ ಅಧ್ಯಕ್ಷೆ ಆಶಾಲತಾ ಪಿ. ಲಾಯಿಲ ಅತ್ಯುತ್ತಮ ಜೆಸಿರೆಟ್ ಅಧ್ಯಕ್ಷೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೇಸಿ ಸದಸ್ಯೆ ಸೌಮ್ಯ ಕುತ್ಲೂರು ಚಿಲುಮೆ ಸೆಲ್ಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.
ಜೆಜೆಸಿ ವಿಭಾಗದಲ್ಲಿ ಘಟಕಕ್ಕೆ ಎಕ್ಸಲೆನ್ಸ್ ಪ್ರಶಸ್ತಿಯನ್ನು ಜೇಜೆಸಿ ಅಧ್ಯಕ್ಷ ವಿನಾಯಕ ಪ್ರಸಾದ್ ಪಡೆದಿದ್ದಾರೆ. ಜೇಸಿರೇಟ್ ಸಪ್ತಾಹ, ರಾಷ್ಟ್ರೀಯ ಮಹಿಳಾ ದಿನಾಚರಣೆ, ಆರೋಗ್ಯ ಸ್ವಚ್ಚತಾ ಜಾಥಾ, ಮತ್ತಿತರ ಸಾಮಾಜಿಕ ಕಾರ್ಯಕ್ರಮಗಳಿಗೆ ಪುರಸ್ಕಾರ ಮತ್ತು ಪ್ರಶಸ್ತಿಗಳನ್ನು ವಲಯಾಧ್ಯಕ್ಷ ಅಶೋಕ ಚೂಂತಾರು ನೀಡಿ ಗೌರವಿಸಿರುತ್ತಾರೆ.
ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷರುಗಳು, ವಲಯದ ಜೇಸಿರೇಟ್ ವಿಭಾಗದ ನಿರ್ದೇಶಕಿ ಸಂಗೀತಾ ಪ್ರಭು, ಜೇಜೆಸಿ ನಿರ್ದೇಶಕ ಸರ್ವಜ್ಞ ತಂತ್ರಿ, ಜೆಸಿಐ ಬೆಳ್ತಂಗಡಿ ಅಧ್ಯಕ್ಷ ಪ್ರಶಾಂತ ಲಾಯಿಲ ಮೊದಲಾದವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಫ್ಯಾಷನ್‌ಶೋ ನಲ್ಲಿ ಆಶಾಲತಾ ಪಿ ಲಾಯಿಲ, ಶುಭಾ ಸ್ವರೂಪ್, ಸೌಮ್ಯ ಬಿ.ಅರ್., ರೇಖಾ ವಿನ್ಸೆಂಟ್, ಲೋಲಾಕ್ಷಿ ಕಿಶಾನ್, ಮತ್ತು ಶ್ರಾವ್ಯ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.