ಕೊನೆರೊಟ್ಟು: ಕೋಳಿ ಅಂಕಕ್ಕೆ ದಾಳಿ

ವೇಣೂರು: ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕಕ್ಕೆ   ದಾಳಿ ನಡೆಸಿದ ವೇಣೂರು ಪೊಲೀಸರು ಹತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೇಣೂರು ಬಜಿರೆ ಗ್ರಾಮದ ಕೊನೆರೊಟ್ಟು ಬಳಿಯ ಸರಕಾರಿ ಗುಡ್ಡದಲ್ಲಿ ಕೋಳಿಅಂಕ ನಡೆಸುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದು, ಮೋನಪ್ಪ, ಸುಧೀರ್, ರಾಜೇಶ್, ರಮೇಶ, ನಾರಾಯಣ, ಧನಂಜಯ, ಶೇಖರ, ವಿಶ್ವನಾಥ, ರಂಜಿತ್ ಹಾಗೂ ಕುಟ್ಟಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರಿಂದ ರೂ.1921 ನಗದು ಹಾಗೂ ವಿವಿಧ ಜಾತಿಯ ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.