HomePage_Banner_
HomePage_Banner_
HomePage_Banner_

ಗುರುವಾಯನಕೆರೆ: ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬೆಳ್ತಂಗಡಿ: ಅಮಲು ಪದಾರ್ಥಗಳ ಸೇವೆನೆ ಒಂದು ಶಾಪವಿದ್ದಂತೆ. ದುರ್ಬಲ ಮನಸ್ಸು ಮತ್ತು ದುರ್ಬಲ ವ್ಯಕ್ತಿತ್ವ ನಮ್ಮ ದುಶ್ಚಟಗಳಿಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಯಾವುದಕ್ಕೂ ಒತ್ತು ನೀಡಬೇಡಿ, ಬದಲಾಗಿ ಜೀವನಕ್ಕೆ ಒತ್ತು ನೀಡಿ ಎಂದು ಜನಜಾಗೃತಿ ವೇದಿಕೆಯ ರಾಜ್ಯ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಸ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ, ಜನಜಾಗೃತಿ ವೇದಿಕೆ ಗುರುವಾಯನಕೆರೆ ವಲಯ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗುರುವಾಯನಕೆರೆ ವಲಯದ ಆಶ್ರಯದಲ್ಲಿ  ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ವಿದ್ಯೆ ವಿನಯಕ್ಕೆ ಭೂಷಣವಾಗಬೇಕೇ ಹೊರತು ಅಹಂಕಾರಕ್ಕೆ ಕಾರಣ ಆಗಬಾರದು. ಇಂದು ಯುವಜನಾಂಗ ಕನಸು ಕಾಣುತ್ತಿಲ್ಲ, ಬದಲಾಗಿ ಕನಸಿನ ಭ್ರಮಲೋಕದಲ್ಲಿದೆ. ಮನೆಯ ವಾತಾವರಣ ಮತ್ತು ಗೆಳೆಯರ ಸಹವಾಸ ಯುವ ಜನಾಂಗವನ್ನು ತಪ್ಪುದಾರಿಗೆ ಎಳೆಯುತ್ತಿರುವುದು ಖೇದಕರ ಎಂದರು.
ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಗೋಪಾಲ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಪದ್ಮನಾಭ ವೇಣೂರು, ಜನಜಾಗೃತಿ ವೇದಿಕೆಯ ಮಾಜಿ ಸದಸ್ಯ ರಾಜ್‌ಗೋಪಾಲ ಭಟ್, ಜನಜಾಗೃತಿ ಯೋಜನಾಧಿಕಾರಿ ಚೆನ್ನಪ್ಪ, ಗುರುವಾಯನಕೆರೆ ಒಕ್ಕೂಟದ ಅಧ್ಯಕ್ಷೆ ಮಾರ್ಸೆಲಿನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ ಅವರು ಸ್ವಾಗತಿಸಿ, ಶಿಕ್ಷಕ ಯೋಗೀಶ್ ನಾಯಕ್ ವಂದಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ವಲಯ ಮೇಲ್ವಿಚಾರಕ ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದ ಹಾಗೂ ಎಸ್‌ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.