HomePage_Banner_
HomePage_Banner_
HomePage_Banner_

ಬೆಳ್ತಂಗಡಿ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ

ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿಯ 2019-20ನೇ ಸಾಲಿನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಬೆಳ್ತಂಗಡಿಯ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ನೆರವೇರಿತು. ಪ್ರಮಾಣವಚನ ಬೋಧಕರಾಗಿ ಲಯನ್ಸ್ ಜಿಲ್ಲೆ 317 ಡಿಯ ದ್ವಿತೀಯ ಉಪರಾಜ್ಯಪಾಲ ಲ| ವಸಂತ್ ಕುಮಾರ್ ಶೆಟ್ಟಿ ಭಾಗವಹಿಸಿ, ನೂತನ ಅಧ್ಯಕ್ಷರಾದ ವಸಂತ ಶೆಟ್ಟಿ ಶ್ರದ್ಧಾ ಮತ್ತು ತಂಡಕ್ಕೆ ಪ್ರಮಾಣ ವಚನ ಬೋಧಿಸಿದರು.

ವೇದಿಕೆಯಲ್ಲಿ ಪ್ರಥಮಾರ್ಧದ ಅಧ್ಯಕ್ಷತೆಯನ್ನು ನಿರ್ಗಮನ ಅಧ್ಯಕ್ಷರಾದ ಲ|ಮೇದಿನಿ ಡಿ. ಗೌಡರವರು ವಹಿಸಿದ್ದರು. ವೇದಿಕೆಯಲ್ಲಿ ದ್ವಿತೀಯ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ದಂಪತಿ, ಪ್ರಾಂತೀಯ ಅಧ್ಯಕ್ಷ ಲ| ರಾಜು ಶೆಟ್ಟಿ, ವಲಯಾಧ್ಯಕ್ಷರುಗಳಾದ ಲ| ಜಯರಾಮ ಶೆಟ್ಟಿಗಾರ್, ಲ| ಹೆರಾಲ್ಡ್ ತಾವ್ರೊ, ನಿರ್ಗಮನ ಕಾರ್ಯದರ್ಶಿ ಲ| ರಾಮ ಪಿ.ಸಾಲಿಯಾನ್, ನಿರ್ಗಮನ ಕೋಶಾಧಿಕಾರಿ ಲ| ಮಂಜುನಾಥ ಜಿ. ಉಪಸ್ಥಿತರಿದ್ದರು.

ವರ್ಷದ ಸೇವಾ ಪಥ ಲಾಂಛನವನ್ನು ದೀಪ ಬೆಳಗಿಸುವುದರ ಮೂಲಕ ವಸಂತ ಶೆಟ್ಟಿ ಶ್ರದ್ಧಾ ದಂಪತಿಗಳು ಉದ್ಘಾಟಿಸಿದರು.ಸೇವಾಚಟುವಟಿಕೆಯ ಅಂಗವಾಗಿ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಜಲಮರುಪೂರಣ ಸಾಧಕ ಜೋಸೆಫ್ ಇವರನ್ನು ಗೌರವಿಸಲಾಯಿತು. ಸವಣಾಲು ಶಾಲೆಗೆ ಜಲಮರುಪೂರಣ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ಹಾಗೂ ವಿಜಯ ಕ್ರೆಡಿಟ್  ಕೋ ಆಪರೇಟಿವ್  ಸೊಸೈಟಿ ಅಧ್ಯಕ್ಷ  ಎಸ್.ಜಯರಾಮ ಶೆಟ್ಟಿ  ಶುಭಾಸಂಸನೆಗೈದರು. ಲ| ವಿನ್ಸೆಂಟ್ ಟಿ.ಡಿ’ಸೋಜಾ ಪ್ರಾರ್ಥಿಸಿ , ಲ| ನಿತ್ಯಾನಂದ ನಾವರ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಲ| ದೇವಿಪ್ರಸಾದ್ ಧ್ವಜವಂದನೆಗೈದರು. ಲ|ಶ್ರೀನಾಥ್ ಕೆ.ಎಂ. ನೂತನ ಸದಸ್ಯರನ್ನು ಪರಿಚಯಿಸಿದರು. ಲ| ಧರಣೇಂದ್ರ ಕೆ.ಜೈನ್ ನೂತನ ತಂಡದ ಪರಿಚಯವಿತ್ತರು. ಲ| ಪಂಚಾಕ್ಷರಪ್ಪ ಪ್ರಮಾಣವಚನ ಬೋಧಕರನ್ನು ಪರಿಚಯಿಸಿದರು. ಕ್ಲಬ್ಬಿನ ಸ್ಥಾಪಕ ಸದಸ್ಯರು, ಪೂರ್ವಾಧ್ಯಕ್ಷರು, ನಿರ್ದೇಶಕರು, ಸದಸ್ಯರುಗಳು ಹಾಜರಿದ್ದರು. ಲ|ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಿದರು. ಲ| ರಾಜೀವ ಡಿ.ಗೌಡ, ಲ| ಹೇಮಂತ ರಾವ್ ಯೆರ್ಡೂರು ಸಹಕರಿಸಿದರು. ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಲ ವಂದಿಸಿದರು. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿಧುಷಿ ವಿದ್ಯಾ ಠೋಸರ್ ಬಳಗದವರಿಂದ ಭರತನಾಟ್ಯ ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.