ಗಾಂಜಾ ಗಿಡದ ಮೊಗ್ಗು, ಬೀಜ ಸಾಗಾಟ ಆರೋಪಿಗೆ ನ್ಯಾಯಾಂಗ ಬಂಧನ

ಕಳಿಯ: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳಿಯ ಗ್ರಾಮ ನಿವಾಸಿ ಉಮ್ಮರ್ ಫಾರೂಕ್(30.ವ) ಎಂಬವರನ್ನು ಬೆಳ್ತಂಗಡಿ ಪೊಲೀಸರು ಮದ್ದಡ್ಕದ ಕಿನ್ನಿಗೋಳಿ-ರೇಷ್ಮೆ ರಸ್ತೆ ಜಂಕ್ಷನ್‌ಎಂಬಲ್ಲಿ ಬಂಧಿಸಿ ಸುಮಾರು 15 ಸಾವಿರ ಮೌಲ್ಯದ ಗಾಂಜಾ ಗಿಡದ ಮೊಗ್ಗುಗಳು ಹಾಗೂ ಬೀಜವನ್ನು ವಶಪಡಿಸಿಕೊಂಡ ಘಟನೆ ಜು.28 ರಂದು ವರದಿಯಾಗಿದೆ.
ಆರೋಪಿ ಉಮ್ಮರ್ ಫಾರೂಕ್ ಅವರು ಅಕ್ರಮವಾಗಿ ಯಾವುದೇ ಪರವಾನಿಗೆ ಯಾ ದಾಖಲೆ ಪತ್ರಗಳಿಲ್ಲದೆ ಬಿಳಿಬಣ್ಣದ ಪ್ಲಾಸ್ಟಿಕ್ ಕ್ಯಾನ್‌ನಲ್ಲಿ ತಲಾ 45.ಗ್ರಾಂ ತೂಕದ ಒಟ್ಟು 35ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಗಾಂಜಾಗಿಡದ ಮೊಗ್ಗುಗಳು ಮತ್ತು ಗಾಂಜಾ ಗಿಡದ ಬೀಜವನ್ನು ಬೀದರ್‌ನ ಮೂಲದ ವ್ಯಕ್ತಿಯಿಂದ 10ಸಾವಿರ ಬೆಲೆಗೆ ಖರೀದಿಸಿ, ಅಕ್ರಮ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ತನ್ನ ವಶದಲ್ಲಿಟ್ಟುಕೊಂಡಿದ್ದುದನ್ನು ಪತ್ತೆಹಚ್ಚಿದ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕರು ಹಾಗೂ ಠಾಣಾ ಸಿಬ್ಬಂದಿಗಳು ಸೂಕ್ತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯ ವಿರುದ್ಧ ಗಾಂಜಾ ಪ್ರಕರಣ ಇದು ಮೂರನೆಯದಾಗಿದ್ದು, ಬೆಳ್ತಂಗಡಿ ಠಾಣೆ ಮತ್ತು ಪುಂಜಾಲಕಟ್ಟೆ ಠಾಣೆಯಲ್ಲಿ ಕೌಟುಂಬಿಕ ವಿವಾದ ಸಂಬಂಧಿತ ದೂರುಗಳೂ ಕೂಡಾ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.