ತೆಂಕಕರಂದೂರು: ಇಲ್ಲಿಯ ಸರಕಾರಿ ಉನ್ನತೀಕರಿಸಿದ ಹಿ.ಪ್ರಾಶಾಲೆ ಪೆರೋಡಿತ್ತಾಯಕಟ್ಟೆಯಲ್ಲಿ 2019-20 ಸಾಲಿನ ಶಾಲಾ ಹಳೆವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.28ರಂದು ಜರುಗಿತು. ಕಾರ್ಯಕ್ರಮಕ್ರಮದ ಉದ್ಘಾಟನೆಯನ್ನು ಕೆ.ವಸಂತ ಸಾಲ್ಯಾನ್ ನೆರವೇರಿಸಿದರು. ಶರತ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಖ್ಯಾತ ಮೂತ್ರರೋಗ ತಜ್ಞ ಡಾ| ಸದಾನಂದ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಂಗಳೂರಿನ ದಿಶಫರ್ಡ್ ಇಂಟರ್ನ್ಯಾಷನಲ್ ಸ್ಕೂಲ್ನ ಸಿಇಒ ಹಸನ್ ಯೂಸುಫ್, ಗೌರವಾಧ್ಯಕ್ಷ ಸಂತೋಷ ಹೆಗ್ಡೆ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನೇಮು ಸಪಲ್ಯ , ನಿವೃತ್ತ ಯೋಧ ರಮಾನಾಥ ರೈ, ಗ್ರಾ.ಪಂ. ಸದಸ್ಯರುಗಳಾದ ಹೇಮಂತ್ ಗುಂಡೇರಿ, ಗುರುರಾಜ್ ಹೆಗ್ಡೆ, ಕೋಶಾಧಿಕಾರಿ ಷರೀಫ್ ಕಟ್ಟೆ, ಮಾಧ್ಯಮ ಸಲಹೆಗಾರ ಬಾಲಕೃಷ್ಣ ನೇಸರ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪಾಧ್ಯಕ್ಷ ನವಾಜ್ ಕಟ್ಟೆ ಸ್ವಾಗತಿಸಿ, ಕಾರ್ಯದರ್ಶಿ ಪ್ರಮೋದರ ವರದಿ ಮಂಡಿಸಿ, ಶಾಲಾಶಿಕ್ಷಕ ದೇವುದಾಸ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ಸಂಶುದ್ದೀನ್ ಧನ್ಯವಾದವಿತ್ತರು. ಶಾಲಾ ಹಳೆವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು