ಬೆಳ್ತಂಗಡಿ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿಯಿಂದ ‘ಹೆಜ್ಜೆ’ ಉದ್ಘಾಟನೆ

ಬೆಳ್ತಂಗಡಿ : ‘ಹೆತ್ತು-ಹೊತ್ತು ಪಾಲನೆ ಮಾಡುವ ಕರ್ತವ್ಯವನ್ನು ಪ್ರಾಮಾಣಿಕತೆ ಮತ್ತು ಪ್ರೀತಿಯಿಂದ ಮಾಡುತ್ತಿರುವ ಮಹಿಳೆಯರು ಸರ್ಕಾರಿ ಕೆಲಸಗಳನ್ನು ಪಡೆಯುವಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಮಂಗಳೂರಿನ ಅಬಕಾರಿ ನಿರೀಕ್ಷಕಿ ಗೀತಾ ಪಿ ಹೇಳಿದರು. ಅವರು ಜು.28 ರಂದು  ಬೆಳ್ತಂಗಡಿ ಸುವರ್ಣ ಆರ್ಕೇಡ್‌ನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಬೆಳ್ತಂಗಡಿ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿಯ ‘ಹೆಜ್ಜೆ -ಹೊಸ ಕನಸಿನೆಡೆಗೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಕನ್ಯಾಡಿ ವಹಿಸಿದ್ದರು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು, ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪ್ರೇಮನಾಥ್ ಬಂಟ್ವಾಳ, ಸಂಪನ್ಮೂಲ ವ್ಯಕ್ತಿ ಬೆಳ್ತಂಗಡಿ ತಾ.ಪಂ.ಸಂಯೋಜಕ ಜಯಾನಂದ ಲಾಯಿಲ , ಬೆಳ್ತಂಗಡಿ ಯುವವಾಹಿನಿ ಮಹಿಳಾ ಸಂಚಲನಾ ಸಮಿತಿಯ ಪ್ರಧಾನ ಸಂಚಾಲಕಿ ಸುಜಾತ ಅಣ್ಣಿ ಪೂಜಾರಿ ಉಪಸ್ಥಿತರಿದ್ದರು.

 

ಸನ್ಮಾನ: ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್‌ರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಜ್ಯೋತಿಕಾ ಎನ್‌ಗೆ ಶೈಕ್ಷಣಿಕ ಗೌರವಾರ್ಪಣೆ ಮಾಡಲಾಯಿತು. ಪುಟಾಣಿಗಳಾದ ಶರಣ್ಯ ಮತ್ತು ಸಂದೀಪ್‌ರನ್ನು ಶೈಕ್ಷಣಿಕ ದತ್ತು ಸ್ವೀಕಾರ ಮಾಡಿಕೊಳ್ಳಲಾಯಿತು. ಮಾ| ಶ್ರೇಯಸ್ ಬರಾಯನಿಗೆ ಸ್ಪಂದನ ಯೋಜನೆಯ ಸಾಂತ್ವಾನ ನಿಧಿಯನ್ನು ಹಸ್ತಾಂತರಿಸಲಾಯಿತು.
ಸಮಾರಂಭದಲ್ಲಿ ಆರೋಗ್ಯ ಕಾರ್ಡ್ ನೋಂದಾವಣೆ ಮತ್ತು ಮಾಹಿತಿ, ಆರೋಗ್ಯ ವಿಮಾ ಸೌಲಭ್ಯಗಳ ಮಾಹಿತಿ ಮತ್ತು ಅರ್ಜಿ, ವಿವಿಧ ಇಲಾಖೆ ಮತ್ತು ಸಂಘಸಂಸ್ಥೆಗಳು ನೀಡುವ ವಿದ್ಯಾರ್ಥಿವೇತನದ ಮಾಹಿತಿ ಮತ್ತು ಅರ್ಜಿ, ಮಹಿಳೆಯರಿಗಾಗಿ ಇರುವ ವಿವಿಧ ಸರ್ಕಾರಿ ಇಲಾಖೆಗಳ ಸೌಲಭ್ಯಗಳ ಬಗ್ಗೆ ಮಾಹಿತಿ ಮುಂತಾದ ಸೌಲಭ್ಯಗಳು ಇದ್ದವು.

ವಿಶಾಖ್ ಜೆ ಪೂಜಾರಿ ಪ್ರಾರ್ಥಿಸಿ, ಘಟಕದ ನಿರ್ದೇಶಕ ಅಶ್ವಥ್ ಕುಮಾರ್ ಬೆಳ್ತಂಗಡಿ ಪ್ರಸ್ತಾವಿಕವಾಗಿ ಮಾತನಾಡಿ, ಮಹಿಳಾ ಸಂಚಾಲನ ಸಮಿತಿ ಕಾರ್ಯದರ್ಶಿ ಸುಧಾಮಣಿ ರಮಾನಂದ್ ಸ್ವಾಗತಿಸಿ, ವೇದಾವತಿ ಪ್ರಭಾಕರ ಧರ್ಮಸ್ಥಳ, ಎಂ.ಕೆ.ಪ್ರಸಾದ್, ಚಂದ್ರಶೇಖರ್ ಅಳದಂಗಡಿ, ರಾಕೇಶ್ ಬಂಗೇರ  ಸನ್ಮಾನಿತರನ್ನು ಪರಿಚಯಿಸಿದರು. ಪ್ರಜ್ಞಾ ಓಡಿಲ್ನಾಳ, ಸಮೀಕ್ಷಾ ಬಾರ್ಲೋಡಿ ಕಾರ್ಯಕ್ರಮ ನಿರೂಪಿಸಿ, ಘಟಕದ ಕಾರ್ಯದರ್ಶಿ ವಿಜಯ್ ಕುಮಾರ್ ಶಿರ್ಲಾಲು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.