ಹೊಸಪಟ್ಣ: ಮಳೆಕೊಯ್ಲು ಪ್ರಾತ್ಯಕ್ಷಿಕೆ

ಎನ್‌ಆರ್‌ಇಜಿಯಲ್ಲಿ ರೂ. 20ಸಾವಿರ ಅನುದಾನ: ಅರುಣ್ ಕ್ರಾಸ್ತ

ವೇಣೂರು: ಪ್ರತಿಯೊಬ್ಬರು ನೀರಿಂಗಿಸುವುದರ ಮಹತ್ವ ಅರಿತುಕೊಂಡು ಜಲಮರುಪೂರಣ ಕಾರ್ಯ ಮಾಡಬೇಕಿದೆ. ಕೊಳವೆ ಬಾವಿಗಳಿಗೆ ಜಲಮರುಪೂರಣ ಮಾಡಲು ಸರಕಾರದ ಉದ್ಯೋಗ ಖಾತರಿ ಯೋಜನೆಯಲ್ಲಿ ಅವಕಾಶ ಇದ್ದು, ರೂ. 20 ಸಾವಿರದವರೆಗೆ ಅನುದಾನ ಲಭಿಸುತ್ತದೆ ಎಂದು ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಯ ಪ್ರೇರಣೆಯಂತೆ ಬಜಿರೆ ಗ್ರಾಮದ ಹೊಸಪಟ್ಣ ಶಿವಾನಂದ ಗೌಡರ ಮನೆಯಲ್ಲಿ ಸರಳ ವಿಧಾನದಲ್ಲಿ ಮಾಡಲಾದ ಮಳೆಕೊಯ್ಲು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಭಾಸ್ಕರ ಅವರು ಮಾಹಿತಿ ನೀಡಿ, ಸರಳ ವಿಧಾನದ ಮಳೆಕೊಯ್ಲು ರಚನೆಗೆ ಪ್ಲಾಸ್ಟಿಕ್ ಬ್ಯಾರಲ್, ಎರಡೂವರೆ ಬಟ್ಟಿಯಷ್ಟು ದಪ್ಪ ಜಲ್ಲಿ, ಎರಡೂವರೆ ಬಟ್ಟಿಯಷ್ಟು ಇದ್ದಿಲು ಹಾಗೂ ಎರಡೂವರೆ ಬಟ್ಟಿಯಷ್ಟು ಚಿಕ್ಕಜಲ್ಲಿ ಅಥವಾ ಚರಲು ಹಾಕಿ ಅದಕ್ಕೆ ಮಹಡಿಯ ನೀರನ್ನು ಬಿಟ್ಟು ಅದು ಕಶ್ಮಲಗಳನ್ನು ಹಿಡಿದಿಟ್ಟು ಶುದ್ಧ ನೀರನ್ನು ಬಾವಿಗೆ ಬಿಡುತ್ತದೆ. ಮಳೆಕೊಯ್ಲಿನ ಅತೀ ಸರಳ ವಿಧಾನ ಇದಾಗಿದ್ದು, ಪ್ರತೀ ಮನೆಯಲ್ಲಿ ನಿರ್ಮಿಸಲು ಮುಂದಾಗಬೇಕು ಎಂದರು.
ವೇಣೂರು ಗ್ರಾ.ಪಂ. ಸದಸ್ಯರಾದ ವಿಶಾಲಾಕ್ಷಿ, ಲೀಲಾವತಿ ಆನಂದ ಪೂಜಾರಿ, ಒಕ್ಕೂಟದ ಅಧ್ಯಕ್ಷ ಶೇಖರ ಪೂಜಾರಿ, ಸೇವಾಪ್ರತಿನಿಧಿ ರೂಪಾ ಚಂದನ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.