HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಜೀವರಕ್ಷಕ ಮುಹಮ್ಮದ್‌ರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ

ಬಂದಾರು: ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ಬಳಿ ಜೀವರಕ್ಷಕರಾಗಿ ನಿಯುಕ್ತಿಗೊಂಡ ಬಂದಾರು ಗ್ರಾಮದ ಓಟೆಚ್ಚಾರು ನಿವಾಸಿ ಮುಹಮ್ಮದ್ ರವರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿ ಲಭಿಸಿದೆ.
ಇವರು ನೇತ್ರಾವತಿ ನದಿಯಲ್ಲಿ ತುಂಬಿದ ನೆgನೀರಿನಲ್ಲಿ ಜೀವದ ಹಂಗು ತೊರೆದು ಪದ್ಮುಂಜ ಸಿ.ಎ.ಬ್ಯಾಂಕ್ ಮ್ಯಾನೇಜರ್ ತಿಮ್ಮಯ್ಯ ಗೌಡರನ್ನು ಪಾರು ಮಾಡಿದ್ದರು. ಶಾಂತಿಮೊಗರು ಎಂಬಲ್ಲಿ ನೀರಿಗೆ ಬಿದ್ದ 3 ಜನರ ಪೈಕಿ ಇಬ್ಬರ ಶವ ಮೇಲೆತ್ತಿರುವುದು, 2018ರ ಆಗಸ್ಟ್‌ನಲ್ಲಿ ಇಚ್ಲಂಪಾಡಿಯಲ್ಲಿ ನೆರೆಯಿಂದಾಗಿ ಮನೆಯೊಳಗಿದ್ದ ಇಬ್ಬರು ಮಹಿಳೆಯರನ್ನು ಪಾರುಮಾಡಿದ್ದರು ಅಲ್ಲದೆ ಈ ಹಿಂದೆ ಪಯಸ್ವಿನಿ ನದಿಯಲ್ಲಿ ಹಲವು ಯುವಕರ ಜೀವರಕ್ಷಣೆ ಮಾಡಿರುವ ಇವರ ಸಾಧನೆಯನ್ನು ಪರಿಗಣಿಸಿ ಇವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಇವರು ಬಂದಾರು ಗ್ರಾಮದ ಜಮೀನ್ದಾರರಾದ ದಿ| ಅಬ್ಬಾಸ್ ಓಟೆಚ್ಚಾರ್ ಮತ್ತು ಆಯಿಷಾ ದಂಪತಿಯ ನಾಲ್ವರು ಪುತ್ರರಲ್ಲಿ3 ನೆಯವರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.