ತಣ್ಣೀರುಪಂತ: ಜುಗಾರಿ ಅಡ್ಡೆಗೆ ಪೊಲೀಸರ ದಾಳಿ

ತಣ್ಣೀರುಪಂತ: ಇಲ್ಲಿಯ ನೋವುಂಡ ಸರಕಾರಿ ಅರಣ್ಯ ಪ್ರದೇಶದ ಪಂಜಿಕುಡೇಲು ಎಂಬಲ್ಲಿ ಗುಡ್ಡಪ್ರದೇಶದಲ್ಲಿ ಜುಗಾರಿ ಆಡುತ್ತಿದ್ದ ಅಡ್ಡೆಗೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿದ ಘಟನೆ ಜು.25 ರಂದು ಸಂಜೆ ವರದಿಯಾಗಿದೆ.
ದಾಳಿ ಸಂದರ್ಭದಲ್ಲಿ ಆಟದಲ್ಲಿ ನಿರತರಾಗಿದ್ದ ದಿಲೀಪ್, ಹರೀಶ್, ಇಕ್ಬಾಲ್, ಲತೀಫ್, ಶೇಖರ್,  ಸತೀಶ್, ಶೇಖರ ಆಚಾರಿ ಎಂಬವರುಗಳನ್ನು ವಶಕ್ಕೆ ಪಡೆದಿದ್ದು, ಅವರಿಂದ ಇಸ್ಪೀಟು ಎಲೆಗಳು, ಪಣಕ್ಕೆ ಇಟ್ಟಿದ್ದ ರೂ.1320 ನಗದು, ಇಸ್ಪೀಟ್ ಎಲೆಗಳು, ಟರ್ಫ್‌ಲ್, 2ಮೋಟಾರ್ ಸೈಕಲ್‌ಗಳು, ಆಟೋರಿಕ್ಷಾ ಹೀಗೆ ಒಟ್ಟು 1.53 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪುಂಜಾಲಕಟ್ಟೆ ಠಾಣಾ ಪಿಎಸ್‌ಐ ಸೌಮ್ಯ ಜೆ, ಸಿಬ್ಬಂದಿಗಳಾದ ಎಎಸ್‌ಐ ನಾರಾಯಣ, ಪಿ.ಸಿ ಗಳಾದ ಸಾಬುಮಿರ್ಜಿ ಹಾಗೂ ಹರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಈ ಸಂಬಂಧ ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ 1963ರಂತೆ ಪ್ರಕರಣ ದಾಖಲಾಗಿರುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.