ಯಡಿಯೂರಪ್ಪ ನನ್ನನ್ನು ಪಕ್ಕಕ್ಕೆ ತಳ್ಳಲಿಲ್ಲ.‌ಕ್ಯಾಮರಕ್ಕೆ ಫೋಸ್ ಕೊಡಲು ಸೂಚಿಸಿದ್ದರು: ಶಾಸಕ ಪೂಂಜ ಸ್ಪಷ್ಟನೆ

Advt_NewsUnder_1
Advt_NewsUnder_1
Advt_NewsUnder_1

ಹರೀಶ್ ಪೂಂಜಾರನ್ನು ಪಕ್ಕಕ್ಕೆ ತಳ್ಳಿದ ಯಡಿಯೂರಪ್ಪ ವೀಡಿಯೋ ವೈರಲ್: ಶಾಸಕ ಪೂಂಜರಿಂದ ಸ್ಪಷ್ಟನೆ


ಬೆಳ್ತಂಗಡಿ: ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಿಜಯದ ಸಂಭ್ರಮಕ್ಕೆ ಅಡ್ಡ ಬಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಪಕ್ಕಕ್ಕೆ ತಳ್ಳಿದ ಯಡಿಯೂರಪ್ಪ ಎಂಬ ಟೈಟಲ್‌ನೊಂದಿಗೆ ವೀಡಿಯೋವೊಂದು ಬಾರೀ ವೈರಲ್ ಆಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಿನ್ನೆಯಿಂದ ನನಗೆ ಮಾನ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರು ಅವಮಾನ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಒಂದು ಹರಿದಾಡುತ್ತಿದೆ. Kumarswamy for CM ಅನ್ನುವ ಜೆಡಿ(ಎಸ್)ಕಾರ್ಯಕರ್ತರ ಹಾಗೂ ಹಲವಾರು ಕಾಂಗ್ರೆಸ್ ಪ್ರೇರಿತ ಪೇಜುಗಳು ಇದನ್ನು ಉಪಯೋಗಿಸಿಕೊಂಡು ನಮ್ಮ ರಾಜ್ಯಾಧ್ಯಕ್ಷರ ತೇಜೋವಧೆಗೆ ನಿಂತಿದ್ದಾರೆ.
ನಿನ್ನೆ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಕುಮಾರಸ್ವಾಮಿ ಮಂಡಿಸಿದ ವಿಶ್ವಾಸ ಮತ ಗೊತ್ತುವಳಿಗೆ ಸೋಲಾದ ನಂತರ ಬಿಜೆಪಿ ಶಾಸಕರು ಫೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಸನ್ಮಾನ್ಯ ಯಡಿಯೂರಪ್ಪಾಜಿ ಅವರ ಮುಂದುಗಡೆ ಇದ್ದ ಕ್ಯಾಮರಕ್ಕೆ ವಿರುದ್ಧ ದಿಕ್ಕಿನಲ್ಲಿ ನಿಂತಿದ್ದ ನನಗೆ ಕ್ಯಾಮರಾ ಕಡೆಗೆ ತಿರುಗಲು ಸೂಚನೆ ನೀಡಿದ್ದರು. ಅದನ್ನು ನಾನು ಅನುಸರಿಸಿದ ಸಂದರ್ಭದ ವಿಡಿಯೋವನ್ನು ಉಪಯೋಗಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ರಾಜ್ಯಾಧ್ಯಕ್ಷರ ಬಗ್ಗೆ ಅಪಪ್ರಚಾರ ಆರಂಭಿಸಿದರು. ಪಾಪ ವಿಶ್ವಾಸಮತ ಸೋತಾಗ ಮುಖ ಉಳಿಸಿಕೊಳ್ಳಲು ಬೇರೇನೂ ಸಿಗದ ಕಾರಣ ಇದನ್ನು ಉಪಯೋಗಿಸಿದ್ದಾರೆ. ಅವರ ಹತಾಶೆ ಇದನ್ನೆಲ್ಲ ಮಾಡಿಸಿದೆ.

ನಮ್ಮ ಕಾರ್ಯಕರ್ತರು ಯಾವುದೇ ಕಾರಣಕ್ಕೂ ವಿರೋಧಿಗಳು ಹಣೆದ ಸಂಚಿನ ಬಲೆಗೆ ಬೀಳಬಾರದು. ಯಡಿಯೂರಪ್ಪಜಿ ಅವರ ನಾಯಕತ್ವದಲ್ಲಿ ರಾಜ್ಯ ಬಿಜೆಪಿಯ ಶಕ್ತಿ ಏನು ಎಂಬುದು ಎಲ್ಲರಿಗೂ ಅರಿವಾಗಿದೆ. ರಾಜ್ಯದ ಮುಂದಿನ ಮುಖಮಂತ್ರಿ, ಮಹಾನ್‌ನಾಯಕ ಶ್ರೀ ಯಡಿಯೂರಪ್ಪ ಅವರ ಗೌರವಕ್ಕೆ ಯಾವುದೇ ಚ್ಯುತಿ ಬರದಂತೆ ನಡೆದುಕೊಳ್ಳೋಣ. ವಿರೋಧಿಗಳ ಸಂಚನ್ನು ಸೋಲಿಸೋಣ. ಇಂತಿ ನಿಮ್ಮ ಪ್ರೀತಿಯ ಹರೀಶ್ ಪೂಂಜ ಎಂದು ಸ್ಪಷ್ಟನೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.