ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಮಗುವಿನಂತೆ ನಗು ಕಾರ್ಯಕ್ರಮ

ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಮಗುವಿನಂತೆ ನಗು ಚಿಣ್ಣರೊಂದಿಗೆ ಒಂದು ದಿನ ವಿಶೇಷ ಕಾರ್ಯಕ್ರಮವನ್ನು  ಸ.ಕಿ.ಪ್ರಾ. ಶಾಲೆ ಅತ್ತಾಜೆಯಲ್ಲಿ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಶೃತಿ ಜೈನ್‌ರವರು ಮಕ್ಕಳಿಗೆ ಡ್ಯಾನ್ಸ್, ಚಿತ್ರಕಲೆ, ವಿವಿಧ ಆಟ, ಹಾಗೂ ಅನೇಕ ಚಟುವಟಿಕೆಗಳನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಕೆಚ್‌ಪೆನ್ನು, ಪೆನ್ಸಿಲ್, ಡ್ರಾಯಿಂಗ್ ಪುಸ್ತಕ, ಚಾಕೊಲೇಟು ಜೊತೆಗೆ ಎಲ್ಲರೂ ಪರಿಸರವನ್ನು ಉಳಿಸಿ ಬೆಳಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿ ಒಂದೊಂದು ಗಿಡಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಪ್ರಶಾಂತ್ ಲಾಲ, ಪೂರ್ವಧ್ಯಕ್ಷ ಸಂತೋಷ ಪಿ ಕೋಟ್ಯಾನ್ ಬಳಂಜ, ಕೋಶಾಧಿಕಾರಿ ಅಭಿನಂದನ್ ಹರೀಶ್ ಕುಮಾರ್, ಉಪಾಧ್ಯಕ್ಷ ಸ್ವರೂಪ್ ಶೇಖರ್, ಕ್ರೀಡಾ ನಿರ್ದೇಶಕ ಶೀತಲ್ ಜೈನ್, ಜೇಸಿರೇಟ್ ಅಧ್ಯಕ್ಷೆ ಆಶಾಲತಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.