ಕೃಷಿ ವಿಜ್ಞಾನಿಯಾಗಿ ಉಜಿರೆಯ ಲಾವಣ್ಯ ಎ.ಕೆ ಆಯ್ಕೆ

ಉಜಿರೆ: ಇಲ್ಲಿನ ಬೆಳಾಲು ಕ್ರಾಸ್ ಬಳಿ ನಿವಾಸಿ, ಇಂದಬೆಟ್ಟು ಕಲ್ಲಾಜೆ ಶಾಲೆಯ ನಿವೃತ ಶಿಕ್ಷಕರಾಗಿದ್ದ ದಿ. ಕೃಷ್ಣ ಎಸ್. ಮತ್ತು ಬೆಳ್ತಂಗಡಿ ಜೂನಿಯರ್ ಕಾಲೇಜಿನಲ್ಲಿ ಅನುಚಾರಿಯಾಗಿರುವ ವಾರಿಜಾ ದಂಪತಿ ಪುತ್ರಿ  ಲಾವಣ್ಯ ಎ.ಕೆ ಅವರು ಪಿಎಡ್‌ಡಿ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 3 ನೇ ರ್‍ಯಾಂಕ್ ಪಡೆದು ಕೃಷಿ ಸಂಶೋಧನಾ ವಿಜ್ಞಾನಿಯಾಗಿ (ಎಆರ್‌ಎಸ್ ಸೈಂಟಿಸ್ಟ್) ಆಯ್ಕೆಯಾಗಿದ್ದಾರೆ.

 ಲಾವಣ್ಯ ಎ.ಕೆ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಪುತ್ತೂರು ತಾಲೂಕಿನ ಬಲ್ಯ ಮತ್ತು ಕಕ್ಕಿಂಜೆ ಅಣಿಯೂರು ಸರಕಾರಿ ಶಾಲೆಯಲ್ಲಿ ಪೂರೈಸಿ, 6 ರಿಂದ 10 ನೇ ತರಗತಿವರೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನದಲ್ಲಿ ಕೈಗೊಂಡಿರುತ್ತಾರೆ. ಪ. ಪೂರ್ವ ಶಿಕ್ಷಣವನ್ನು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ನಡೆಸಿ, ಬಳಿಕ ಸಿಇಟಿ ಮುಖಾಂತರ ಯುನಿವರ್ಸಿಟಿ ಆಫ್ ಎಗ್ರಿಕಲ್ಚರ್ ಸೈನ್ಸ್ ಆಫ್ ಧಾರವಾಡದಲ್ಲಿ ಬಿಎಸ್‌ಎ ಶಿಕ್ಷಣ ಪಡೆದುಕೊಂಡಿರುತ್ತಾರೆ.

ಬಳಿಕ ಜೂನಿಯರ್ ರೀಸರ್ಚ್ ಫೆಲೋ(ಜೆಆರ್‌ಎಫ್) ಪರೀಕ್ಷೆ ಬರೆದು ಭಾರತದ ಉನ್ನತ ಸಂಸ್ಥೆಯಾದ ಇಂಡಿಯನ್ ಎಗ್ರಿಕಲ್ಚರ್ ರೀಸರ್ಚ್ ಇನ್ಸ್‌ಟ್ಯೂಟ್ ನವದೆಹಲಿಗೆ ಆಯ್ಕೆಗೊಂಡು ಎಂಎಸ್ಸಿ (ಮೈಕ್ರೋ ಬಯೋಲಜಿ) ಪೂರ್ಣಗೊಳಿಸಿರುತ್ತಾರೆ. ಬಳಿಕ ಇದೀಗ ಮೈಕ್ರೋ ಬಯೋಲಜಿ ವಿಷಯದಲ್ಲಿ ಡಾಕ್ಟರೇಟ್ ಮಾಡುತ್ತಿದ್ದಾರೆ.
ಇದೀಗ ಭಾರತೀಯ ಕೃಷಿ ಅನುಸಂದನ್ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಎಆರ್‌ಎಸ್ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ. ಅವರ ಸಹೋದರಿ ಕಾವ್ಯಶ್ರೀ ಈಗಾಗಲೇ ಪದವಿ ಮುಗಿಸಿ ಬ್ಯಾಂಕಿಂಗ್ ತರಬೇತಿ ಪಡೆಯುತ್ತಿದ್ದರೆ, ಸಹೋದರ ನಿತೇಶ್ ಇಂಜಿನಿಯರಿಂಗ್ ಅಭ್ಯಸಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.