HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶೇ.100 ಫಲಿತಾಂಶ ಪಡೆದ ಸರಕಾರಿ ಶಾಲೆಗಳಿಗೆ ಮಂಜುಶ್ರೀ ಸೀನಿಯರ್ ಛೇಂಬರ್‌ನಿಂದ ಅಭಿನಂದನಾ ಫಲಕ

ನಾರಾವಿ ಪ್ರೌಢ ಶಾಲೆ

ಬೆಳ್ತಂಗಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಗುರುವಾಯನಕೆರೆ, ನಾರಾವಿ, ಮುಂಡಾಜೆ ಮತ್ತು ಮಿತ್ತಬಾಗಿಲು ಸರಕಾರಿ ಪ್ರೌಢಶಾಲೆಗಳಿಗೆ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ವತಿಯಿಂದ ಅಭಿನಂದನಾ ಫಲಕ ಮತ್ತು ಎಲ್ಲಾ ಶಿಕ್ಷಕರಿಗೆ ಪೆನ್ನುಗಳನ್ನು ಜು.22 ರಂದು ಕೊಡುಗೆಯಾಗಿ ನೀಡಲಾಯಿತು.

ಗುರುವಾಯನಕೆರೆ ಪ್ರೌಢ ಶಾಲೆ

ನಾರಾವಿ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಾರಾವಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಉದಯ ಹೆಗ್ಡೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬೆಳಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಅಧ್ಯಕ್ಷ ಪಿ.ಪಿ ಜಾಯ್, ನಿಕಟಪೂರ್ವಾಧ್ಯಕ್ಷ ಪ್ರಮೊದ್ ಆರ್ ನಾಯಕ್, ಕಾರ್ಯಕ್ರಮದ ಸಂಯೋಜಕ ಪೃಥ್ವಿರಂಜನ್ ರಾವ್, ಕೋಶಾಧಿಕಾರಿ ಯಶವಂತ ಪಟವರ್ಧನ್, ಸದಸ್ಯ ಎಂ.ಸಿ ಸುಭಾಷ್ ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.