HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಲಾಯಿಲ ಶ್ರೀ ರಾಘವೇಂದ್ರ ಮಠದ ನೂತನ ಗೋಪುರ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಲಾಯಿಲ: ಇಲ್ಲಿಯ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವವು ಆ.16 ರಿಂದ 18ರವರೆಗೆ ನಡೆಯಲಿದೆ. ಇದೇ ಸಂದರ್ಭ ಸುಮಾರು 10.ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಮಠದ ನೂತನ ಗೋಪುರದ ಕಳಶ ಪ್ರತಿಷ್ಠೆ ಮತ್ತು ಪೂಜಾ ವಿಧಿವಿಧಾನಗಳು ಆ.15ರಂದು ಜರುಗಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಜು.22ರಂದು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಗುರುರಾಘವೇಂದ್ರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಆರ್ ನಾಯಕ್, ಕೋಶಾಧಿಕಾರಿ ಶೇಖರ ಬಂಗೇರ, ಜೊತೆಕಾರ್ಯದರ್ಶಿ ಶಂಕರ ಹೆಗ್ಡೆ, ಟ್ರಸ್ಟ್ ಸದಸ್ಯ ವಸಂತ ಸುವರ್ಣ, ಉತ್ಸವ ಸಮಿತಿ ಸದಸ್ಯರಾದ ನಿತ್ಯಾನಂದ ನಾವರ, ನಾರಾಯಣ ಪೂಜಾರಿ ಮಚ್ಚಿನ, ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.