HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಂಗಳೂರಿನಲ್ಲಿ ರಸ್ತೆ ಅಪಘಾತ: ಉರುವಾಲಿನ ಯುವಕ ಸಾವು

ಉರುವಾಲು: ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಉರುವಾಲು ಗ್ರಾಮದ ಎಂಜಿರಪಳಿಕೆ ನಿವಾಸಿ ಆದಿತ್ಯ ಶೆಟ್ಟಿ(20.ವ)ಸಾವನ್ನಪ್ಪಿದ ಘಟನೆ ಜು.21 ರಂದು ವರದಿಯಾಗಿದೆ.
ಎಂಜಿರಪಳಿಕೆ ನಿವಾಸಿ, ಅಂಚೆ ಉದ್ಯೋಗಿ ಸುಂದರ ಶೆಟ್ಟಿಯವರ ಏಕೈಕ ಪುತ್ರನಾದ ಆದಿತ್ಯ ಶೆಟ್ಟಿಯವರು ಹರಿಹರಪುರದ ಪ್ರಭೋಧಿನಿ ಗುರುಕುಲದಲ್ಲಿ ಅಧ್ಯಯನ ನಡೆಸಿ, ಪ್ರಸ್ತುತ ಅಲ್ಲೇ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಗುರುಕುಲದ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಬೆಂಗಳೂರಿನಲ್ಲಿರುವ ಯೋಗ ಯುನಿವರ್ಸಿಟಿಗೆ ಕರೆದೊಯ್ದು, ಅಲ್ಲೇ ಸಮೀಪವಿರುವ ವೇದವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ವಾಪಾಸಾಗುತ್ತಿದ್ದ ವೇಳೆ ಅವರು ಚಲಾಯಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಹಾಲಿನ ಟ್ಯಾಂಕರ್ ಡಿಕ್ಕಿಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಇವರು ಪ್ರತಿಭಾನ್ವಿತ ಯೋಗಪಟುವಾಗಿದ್ದು, ಸಂಸ್ಕೃತ ಪಾಂಡಿತ್ಯವನ್ನು ಹೊಂದಿದ್ದರು. ಮೃತರು ತಂದೆ ಸುಂದರ ಶೆಟ್ಟಿ, ತಾಯಿ ಸುನಂದ , ಸಹೋದರಿ ಅನನ್ಯ  ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.