HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕೊಕ್ರಾಡಿ : ನಿವೃತ್ತ ಮುಖ್ಯ ಶಿಕ್ಷಕ ಕೆ. ಡೀಕಯ್ಯ ಪೂಜಾರಿ ನಿಧನ

ಕೊಕ್ರಾಡಿ:  ಇಲ್ಲಿಯ ಹರಿನಿವಾಸ ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ಕೆ. ಡೀಕಯ್ಯ ಪೂಜಾರಿ (85.ವ ) ಅವರು ಅಲ್ಪಕಾಲದ ಅಸೌಖ್ಯದಿಂದ ಜು. 21ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
1956ರಲ್ಲಿ ಅಧ್ಯಾಪಕ ವೃತ್ತಿಗೆ ಕಾಲಿಟ್ಟಿರುವ ಇವರು ಬೆಳಾಲು, ರೇಂಜಾಳ, ಆರಂಬೋಡಿ, ಹಾಳೆಕಟ್ಟೆ, ಬೆಳ್ಮಣ್, ಮಾಳ, ಈದು, ಹೊಸ್ಮಾರು, ಕುತ್ಲೂರು, ಸಾವ್ಯ ಸೇರಿದಂತೆ ಹಲವು ಶಾಲೆಗಳಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಮಾರ್ಚ್1993 ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತ ಹೊಂದಿದ್ದರು. ತಾಲೂಕು, ಜಿಲ್ಲಾ ಮಟ್ಟದ ಶಿಕ್ಷಕರ ಸಂಘದ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿರುವ ಇವರು ಶಿಕ್ಷಕರ ಸಮಸ್ಯೆ ನಿವಾರಣೆಗೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಅನ್ನ ಸತ್ಯಾಗ್ರಹ ಮಾಡಿದ್ದರು. ಮೃತರು ಬೆಳ್ತಂಗಡಿ  ಗುರುನಾರಾಯಣ ಸಂಘದ ನಿರ್ದೇಶಕ ಸೂರ್ಯನಾರಾಯಣ  ಡಿ.ಕೆ,  ಉದ್ಯಮಿ , ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲರ ನಿಕಟಪೂರ್ವ ಪ್ರತಿನಿಧಿ  ಜಗದೀಶ್ ಚಂದ್ರ  ಡಿ.ಕೆ  ಸೇರಿದಂತೆ 4 ಮಂದಿ ಪುತ್ರರು,  4 ಮಂದಿ ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.