ವೇಣೂರು: ಅಂತರ್ ಜಿಲ್ಲಾ ಗೋ ಕಳವು ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಪ್ರಮುಖ ಆರೋಪಿಯನ್ನು ಜು.21ರಂದು ವೇಣೂರು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಸುದೇಕಾರು ನಿವಾಸಿ ಅಬ್ದುಲ್ ಲತೀಫ್ (25) ಬಂಧಿತ ಆರೋಪಿ. ದನದ ವ್ಯಾಪಾರ ವೃತ್ತಿಯನ್ನು ಮಾಡುತ್ತಿದ್ದ ಈತ ಅಂತರ್ ಜಿಲ್ಲಾ ಗೋವು ಕಳ್ಳರೊಂದಿಗೆ ಸಂಪರ್ಕ ಇಟ್ಟುಕೊಂಡು ಸ್ಥಳೀಯವಾಗಿ ಮಾಹಿತಿ ನೀಡುತ್ತಿದ್ದ. ದನಗಳನ್ನು ಪಡೆಯುವ ಮತ್ತು ಮಾರಾಟದ ನೆಪದಲ್ಲಿ ರಸ್ತೆ, ಹೆದ್ದಾರಿ ಬದಿಯ ಮನೆಗಳಿಗೆ ಭೇಟಿ ನೀಡಿ ಕಳ್ಳರಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.