ಮಚ್ಚಿನ: ಸ್ವಚ್ಛ ಭಾರತ ಅಭಿಯಾನ ಕಾಲ್ನಡಿಗೆ ಜಾಥಾ

ಮಚ್ಚಿನ: ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಹೆಚ್‌ಪಿಸಿಎಲ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಚ ಭಾರತ ಅಭಿಯಾನ ಮತ್ತು ಕಾಲ್ನಡಿಗೆ ಜಾಥಾ ಇತ್ತೀಚೆಗೆ ನಡೆಯಿತು.
ಹೆಚ್‌ಪಿಸಿಎಲ್ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಕಿರಣ್ ಕುಮಾರ್ ಮಾತನಾಡಿ, ಮಕ್ಕಳು ಬಾಲ್ಯದಲ್ಲೇ ಶಿಕ್ಷಣ ಜೊತೆಗೆ ಪರಿಸರ ಸ್ನೇಹಿ ಮತ್ತು ಸ್ವಚ್ಛತೆ ಬಗ್ಗೆ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ತಾ.ಪಂ. ಸದಸ್ಯೆ ವಸಂತಿ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರುಕ್ಮಯ, ಪರಮೇಶ್ವರ, ಹೆಚ್‌ಪಿಸಿಎಲ್ ಅಧಿಕಾರಿ ಮಯೂರ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಪರಿಸರದ ಬಗ್ಗೆ ಮಾಹಿತಿ ನೀಡಿದರು.

ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ ಸ್ವಚ್ಚ ಭಾರತ ಅಭಿಯಾನದ ಬಗ್ಗೆ ಚಿತ್ರಸ್ಪರ್ಧೆ, ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಮೇಲ್ವಿಚಾರಕ ಶ್ರೀಧರ ಕೆ. ಲೈನ್‌ವಾಕರ್ಸ್‌ಗಳಾದ ಮೋಹನ, ಜೋಯ್ಸ್ನ, ಯೋಗೀಶ, ಯಶೋಧರ, ಮುಖ್ಯ ಶಿಕ್ಷಕ ವಿಠಲ ಬಿ., ಸಹ ಶಿಕ್ಷಕರಾದ ಸುಭಾಷ್, ಲೀನಾ, ಅಗ್ನೇಸ್ ಪ್ರಮೀಳ ಲೋಬೊ, ದಿವ್ಯಾ ಹೆಚ್.ಎ, ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಕಾಲ್ನಾಡಿಗೆ ಜಾಥದಲ್ಲಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.