HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕಳಿಯ: ದೈವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ

ಕಳಿಯ: ಇಲ್ಲಿಯ ಬದಿನಡೆ, ಮಂಜಲಡ್ಕ ದೈವಗಳ ದೈವಸ್ಥಾನಕ್ಕೆ ಗೌರವಾಧ್ಯಕ್ಷ ವೇ.ಮೂ.ರಾಘವೇಂದ್ರ ಬಾಂಗಿಣ್ಣಾಯರ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ  ಶಿಲಾನ್ಯಾಸ ನಡೆಯಿತು.
ಕಾರ್ಯಾಧ್ಯಕ್ಷ, ಕಳಿಯಬೀಡು ಮನೆತನದ ಸುರೇಂದ್ರ ಕುಮಾರ್ ಕೆಸರು ಕಲ್ಲುಹಾಕುವ ಮೂಲಕ ಶಿಲಾನ್ಯಾಸ ನೆರವೇರಿಸಿದರು.  ವಾಸ್ತುತಜ್ಞ ರಮೇಶ್ ಕಾರಂತ ಬೆದ್ರಡ್ಕ ಕಾಸರಗೋಡು, ಕ್ಷೇತ್ರಕ್ಕೆ ಭೇಟಿ ನೀಡಿ ದೈವಸ್ಥಾನದ ನೀಲನಕಾಶೆ ತಯಾರಿಸಿ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಸುವರ್ಣೇಂದ್ರ ಕುಮಾರ್, ಕಾರ್ಯದರ್ಶಿ ಸತ್ಯೇಂದ್ರ ಕುಮಾರ್, ಕೋಶಾಧಿಕಾರಿ ಕೂಸಪ್ಪ ಗೌಡ ಹೀರ್ಯ, ನಡ ಮನೆತನದ ಮುನಿರಾಜ ಅಜ್ರಿ, ನಾರಾಯಣ ಆಚಾರ್ಯ ಗೇರುಕಟ್ಟೆ, ಭೋಜ ಶೆಟ್ಟಿ ಮುಗೇರುಮಾರು, ಬೊಮ್ಮಣ್ಣ ಪೂಜಾರಿ ಮೇರ್ಲ, ಉದ್ಯಮಿಗಳಾದ ಸುರೇಶ್ ಆರ್.ಎನ್., ಉಮೇಶ್ ಬಳ್ಳಿದಡ್ಡ. ಸ್ಥಳೀಯರಾದ ಸುಂದರ ಬಂಗೇರ ಬರಾಯ, ತಾರಾನಾಥ ಬಳ್ಳಿದಡ್ಡ, ರತ್ನಾಕರ ಬಳ್ಳಿದಡ್ಡ, ಪ್ರಮೋದ ಬಳ್ಳಿದಡ್ಡ, ಕಮಲಾಕ್ಷ ಬಳ್ಳಿದಡ್ಡ, ರಮೇಶ್ ಕುಂಠಿನಿ, ಪ್ರವೀಣ್ ಬಳ್ಳಿದಡ್ಡ, ನವೀನ್ ದೋಣಿಪಲ್ಕೆ ಹಾಗೂ ಪದಾಧಿಕಾರಿಗಳು, ಸರ್ವಸದಸ್ಯರು, ಭಕ್ತಾಧಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

ಕಳಿಯ ಇತಿಹಾಸ ಪ್ರಸಿದ್ಧ ಕಳಿಯಬೀಡು ಮನೆತನದ ನೇತೃತ್ವದಲ್ಲಿ ಅನಾದಿಕಾಲದಿಂದಲೂ ಆರಾಧಿಸಲ್ಪಡುತ್ತಿದ್ದ ಬದಿನಡೆಯ ಉಳ್ಳಾಕ್ಳು, ಉಳ್ಳಾಳ್ತಿ(ಬಂಗಾಡಿ ದೈವಗಳು) ರಕ್ತೇಶ್ವರಿ, ಮಹಿಷಂತಾಯ ಮತ್ತು ಪಂಜುರ್ಲಿ ದೈವ ಹಾಗೂ ಮಂಜಲಡ್ಕ ದೈವಗಳಾದ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡೇಶ್ವರಿ ಮತ್ತು ಕಲ್ಕುಡ ದೈವಗಳ ಕ್ಷೇತ್ರದಲ್ಲಿ ಸುಮಾರು 75 ವರ್ಷಗಳಿಂದ ಕಾಲಾವಧಿಯ ಪರ್ವಸೇವೆ, ನರ್ತನ ಸೇವೆಗಳು ಸ್ಥಗಿತಗೊಂಡಿದೆ ಎಂಬುದನ್ನು ಈ ಹಿಂದೆ ದೈವಜ್ಞರಿಂದ ತಿಳಿದು ಗ್ರಾಮದ ಭಗವಧ್ಭಕ್ತರೆಲ್ಲರೂ ಸೇರಿ ದೈವಗಳಿಗೆ ದೈವಸ್ಥಾನ ನಿರ್ಮಿಸಲು ಊರಿನ, ಪರಊರಿನ ಭಕ್ತಾಧಿಗಳು ಮುಂದಾಗಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.