HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಹೊಸಂಗಡಿ: ವಿಷಸೇವಿಸಿ ಆತ್ಮಹತ್ಯೆ

ವೇಣೂರು: ಜೀವನದಲ್ಲಿ ಚಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿಯಲ್ಲಿ ನಡೆದಿದೆ.
ಹೊಸಂಗಡಿ ಗ್ರಾಮದ ಪಟ್ಟಾಡಿಮನೆ ನಿವಾಸಿ ಸುಂದರ (62) ಆತ್ಮಹತ್ಯೆ ಮಾಡಿಕೊಂಡವರು. ಜು.16ರಂದು ಬೆಳಿಗ್ಗೆ ಮನೆಮಂದಿಯೊಂದಿಗೆ ಜಗಳವಾಡಿ ಸಂಜೆ ವೇಳೆಗೆ ಮದ್ಯದೊಂದಿಗೆ ಯಾವುದೋ ವಿಷ ಪದಾರ್ಥ ಸೇವಿಸಿ ಮನೆಗೆ ವಾಪಸಾಗಿದ್ದು, ತೀವ್ರ ಅಸ್ವಸ್ಥಗೊಂಡ ಅವರನ್ನು ಮನೆಮಂದಿ ತಕ್ಷಣ ಮೂಡಬಿದಿರೆ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ರಾತ್ರಿವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಸುಂದರ ಅವರು ಮೃತಪಟ್ಟಿದ್ದು, ಅವರ ಪುತ್ರ ಸುರೇಶ್ ಅವರು ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.