ಸಹಕಾರಿ ಸಂಘ-ಬ್ಯಾಂಕ್ ಸಾಲ ಮರುಪಾವತಿ ಅವಧಿ ವಿಸ್ತರಣೆ

ಬೆಳ್ತಂಗಡಿ: ಸಹಕಾರಿ ಸಂಘಗಳು ಹಾಗೂ ಬ್ಯಾಂಕ್‌ಗಳ ಮೂಲಕ ರೂ.1 ಲಕ್ಷಕ್ಕಿಂತ ಹೆಚ್ಚಿನ ಸಾಲ ಪಡೆದು ಮರುಪಾವತಿಸದೇ ಇರುವ ರೈತರು ಜುಲೈ 31 ರೊಳಗೆ ಸಾಲ ಹಾಗೂ ಅದರ ಮೇಲಿನ ಬಡ್ಡಿಯನ್ನು ಮರುಪಾವತಿಸಿದರೆ ಅಂತಹ ರೈತರು ಸಾಲ ಮನ್ನಾ ಪ್ರಯೋಜನ ಪಡೆಯಬಹುದು ಎಂದು ಸರಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಸಹಕಾರಿ ಸಂಘಗಳಲ್ಲಿ 2018ರ ಜುಲೈ 10ಕ್ಕೆ ಹೊರ ಬಾಕಿ ಇರುವ ರೈತರ ರೂ. 1 ಲಕ್ಷದವರೆಗಿನ ಸಾಲ ಮನ್ನಾ ಮಾಡಲು ಸರಕಾರ ಆದೇಶ ಹೊರಡಿಸಿತ್ತು. ಆದರೆ 1 ಲಕ್ಷಕ್ಕಿಂತಲೂ ಹೆಚ್ಚಿನ ಸಾಲ ಪಡೆದಿದ್ದರೆ ಹೆಚ್ಚಿನ ಹಣವನ್ನು 2019ರ ಮಾರ್ಚ್ 31 ರೊಳಗೆ ಪಾವತಿ ಮಾಡಿದರೆ ಮಾತ್ರ ಸಾಲ ಮನ್ನಾ ಪ್ರಯೋಜನ ಪಡೆಯಲು ಅರ್ಹರಾಗುತ್ತಾರೆ ಎಂದು ಸಹ ಸರಕಾರ ಷರತ್ತು ವಿಧಿಸಿತ್ತು. ಸರಕಾರದ ಷರತ್ತಿಗೆ ಒಳಪಟ್ಟು ರೂ. 1 ಲಕ್ಷಕ್ಕಿಂತಲೂ ಹೆಚ್ಚಿನ ಸಾಲ ಪಡೆದು ಮರುಪಾವತಿ ಮಾಡದೇ ಉಳಿಸಿಕೊಂಡಿರುವ ರೈತರು ಸಾಲ ಮನ್ನಾ ಯೋಜನೆಯ ಪ್ರಯೋಜನ ಪಡೆಯಲು ರಾಜ್ಯ ಸರಕಾರ ಮತ್ತೊಂದು ಅವಕಾಶ ಒದಗಿಸಿದೆ. ರೂ. 1 ಲಕ್ಷಕ್ಕಿಂತ ಹೆಚ್ಚಿನ ಸಾಲ ಹಾಗೂ ಅದರ ಮೇಲಿನ ಬಡ್ಡಿಯನ್ನು ಮರು ಪಾವತಿಸಲು ಜುಲೈ 31 ರವರೆಗೆ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.