ಬೆಳ್ತಂಗಡಿ ಸೋಶಿಯಲ್ ಮೀಡಿಯಾದಲ್ಲಿ ಈ ವಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಎಲ್ಲರೂ ಕೈ ಕೊಟ್ಟರು… ನನಗೆ ಬೀಡಿಯೇ ಗತಿ
ಯಾರೂ ಇಲ್ಲ. ಎಲ್ಲರೂ ಕೈಕೊಟ್ಟು ಹೋದರು. ನನಗೆ ಬೀಡಿಯೇ ಗತಿ ಹೀಗೊಂದು  ಡಯಲಾಗ್, ಜೊತೆಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ ಅವರನ್ನೇ ಹೋಲುವ ವ್ಯಕ್ತಿಯೊಬ್ಬರ ಬೀಡಿ ಎಳೆಯುವ ವೀಡಿಯೋ ದೃಶ್ಯವೊಂದು ಈ ವಾರ ಎಲ್ಲರ ವಾಟ್ಸ್‌ಆಪ್ ನಲ್ಲಿ ವೈರಲ್ ಆಗಿತ್ತು. ಸಾಲು ಸಾಲು ಅತೃಪ್ತ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿ ಮುಂಬೈ ಹೊಟೇಲ್ ಸೇರಿರುವ ಈ ವಾರದ ಬಿಸಿ ರಾಜಕೀಯ ವಾತಾವರಣದ ಸಂದರ್ಭ ಸದ್ರಿ ವೀಡಿಯೋದಲ್ಲಿರುವ ವ್ಯಕ್ತಿ ಎಚ್‌ಡಿಕೆ ಅವರನ್ನೇ ಹೋಲುತ್ತಿರುವುದು ಹಾಸ್ಯದ ವಸ್ತುವಾಗಿತ್ತು.

ಉತ್ತರ ಕ್ರಿಯೆಗೆ ಕಾಗೆಯ ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಿ:
ಸಾಮಾಜಿಕ ಜಾಲತಾಣದಲ್ಲಿ ವಾರದ ಸುದ್ದಿಯಾದ ವ್ಯಕ್ತಿ ಉಡುಪಿ ಜಿಲ್ಲೆಯ ಕಾಪು ಪ್ರಶಾಂತ್ ಪೂಜಾರಿ. ಉತ್ತರ ಕ್ರಿಯೆಗೆ ಕಾಗೆ ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಿರಿ ಎಂದು ಫೇಸ್‌ಬುಕ್‌ನಲ್ಲಿ ಹಾಕಿದ್ದ ಅವರ ಪೋಸ್ಟ್ ಭಾರೀ ಸುದ್ದಿ ಎಬ್ಬಿಸಿತ್ತು. ಸಂಪ್ರದಾಯದಂತೆ ಉತ್ತರಕ್ರಿಯೆ ತಿಥಿ ಊಟವನ್ನು ಕಾಗೆ ಸ್ವೀಕರಿಸಿದರೆ ಮಾಡಿದ ಕ್ರಿಯೆ ಸಂಪೂರ್ಣ ಎಂಬ ಧಾರ್ಮಿಕ ನಂಬಿಕೆ ಇರುವ ಹಿನ್ನೆಲೆಯಲ್ಲಿ ಈಗ ಪರಿಸರದಲ್ಲಿ ಕಾಗೆಗಳ ಸಂಖ್ಯೆ ತೀರಾ ಕಡಿಮೆಯಾಗಿರುವುದರಿಂದ ಕೆಲವೆಡೆ ಸಮಸ್ಯೆಗಳು ಎರುರಾಗಿರುವ ಈ ಕಾಲಘಟ್ಟದಲ್ಲಿ ಇದು ವಿಶೇಷ ಮನ್ನಣೆ ಪಡೆಯಿತು.
ಆದರೆ ವಿಚಾರ ಅರಿತ ಅರಣ್ಯ ಅಧಿಕಾರಿಗಳು ಪ್ರಶಾಂತ್ ಅವರ ಮನೆಗೆ ಭೇಟಿ ನೀಡಿ ಅವರು ಪ್ರೀತಿಯಿಂದ ಸಾಕಿದ ಕಾಗೆಯನ್ನು ಬಿಡುಗಡೆಗೊಳಿಸಿದ್ದಾರೆ. ಈ ರೀತಿ ಕಾಗೆ ಸಾಕಲು, ಅಥವಾ ವ್ಯವಹಾರ ಮಾಡಲು ಅವಕಾಶ ಇಲ್ಲ ಎಂದು ಅವರಿಗೆ ತಿಳಿಹೇಳಲಾಗಿದೆ ಎಂದು ಸುದ್ದಿಯಾಗಿದೆ.

ಆಧ್ಯಾತ್ಮ ಗುರು ಪೇಜಾವರ ಶ್ರೀಗಳಿಂದ ಭಾರತದ ಗುರು ನರೇಂದ್ರ ಮೋದಿ ಭೇಟಿ:

ಜು.16 ರಂದು ಗುರುಪೂರ್ಣಿಮೆ ದಿನದಂದು ಆಧ್ಯಾತ್ಮಗುರು ಉಡುಪಿ ಅಧೋಕ್ಷಜ ಮಠದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳನ್ನು ದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದ ಫೋಟೋ ಮಂಗಳವಾರದಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ಈ ಫೋಟೋವನ್ನು ಸ್ವತಃ ನರೇಂದ್ರ ಮೋದಿ ಅವರೂ ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ. ಮೋದಿ ಅವರು ಸ್ವಾಮೀಜಿಗಳನ್ನು ತನ್ನ ಕಚೇರಿಯಲ್ಲಿ ಕೈಯ್ಯಲ್ಲಿ ಹಿಡಿದುಕೊಂಡು ನಡೆದು ಬರುವ ದೃಷ್ಯವಿದ್ದು, ಈ ಚಿತ್ರದಲ್ಲಿ ಮೋದೀಜಿ ಅವರು ಕಾಲಿಗೆ ಶೂ ಧರಿಸಿದ್ದು, ಈ ಬಗ್ಗೆ ಸೋಷಿಯಲ್ ಮಿಡಿಯಾ ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಲಡ್ಡಿನಲ್ಲಿ ಒಣ ದ್ರಾಕ್ಷಿ ಹೆಚ್ಚಿದ್ದುದಕ್ಕೆ ಗುಂಡನಿಗೆ ಬಹುಮಾನ..!
ಗುಂಡ ಮತ್ತು ಪುಂಡ ಲಡ್ಡು ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೊದಲಿಗೆ ಇಬ್ಬರೂ ಕೊಟ್ಟ ಸಮಯದಲ್ಲಿ ಹತ್ತು ಹತ್ತು ಲಡ್ಡು ತಿಂದರು.
ಟೈ-ಬ್ರೇಕ್ ಮಾಡಲು ಮತ್ತೆ ನಾಲ್ಕು ಲಡ್ಡುಗಳನ್ನು ಕೊಡಲಾಯಿತು. ಅದನ್ನೂ ಇಬ್ಬರು ಒಂದೇ ಸಮಯಕ್ಕೆ ತಿಂದು ಮುಗಿಸಿದರು.
ಕೊನೆಗೆ ಗುಂಡ ತಿಂದ ಲಡ್ಡುಗಳಲ್ಲಿ ಒಣದ್ರಾಕ್ಷಿ ಜಾಸ್ತಿ ಇತ್ತು ಎಂಬ ಲೆಕ್ಕಾಚಾರದಲ್ಲಿ ಗುಂಡನನ್ನು ವಿಜಯಿ ಎಂದು ಘೋಷಿಸಲಾಯಿತು.
(ವರ್ಲ್ಡ್ ಕಪ್ ಪಂದ್ಯಾಟದ ಅಂತಿಮ ಪಂದ್ಯದ ಫಲಿತಾಂಶದ ಬಗ್ಗೆ ಈ ವಾರ ಅನೇಕ ಹಾಸ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಆ ಪೈಕಿ ಇದೂ ಒಂದು)

ಗ್ರಹಣದ ದಿನ ಊಟವಿಲ್ಲ, ಬಡವರಿಗೆ ಯಾವತ್ತೂ ಊಟ ಇಲ್ಲ….
ಈ ಚಿತ್ರದಲ್ಲಿರುವ ಸಂದೇಶದಂತೆ ಗ್ರಹಣ 1 ದಿನ ಉಪವಾಸದ ಬಗ್ಗೆ ಈ ಚಿತ್ರದೊಂದಿಗೆ ಮಾರ್ಮಿಕ ಸಂದೇಶ ನೀಡಿದ್ದು, ಊಟ ಇಲ್ಲದವರ ಬಾಳಿನಲ್ಲಿ ಪ್ರತೀ ದಿನವೂ ಗ್ರಹಣ ಇದೆ ಎಂದು ಯಾರೂ ಹೇಳಿಲ್ಲ ಎಂದು ಬರೆದಿದ್ದಾರೆ. ಇದನ್ನು ಜನ ತಮ್ಮ ಮಿತ್ರವರ್ಗದಲ್ಲಿ ಫಾರ್ವರ್ಡ್ ಮಾಡಿ ಚಿತ್ರ- ಸಂದೇಶಕ್ಕೆ ಬೆಂಬಲ ಸೂಚಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.