HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಗೋಮಾಳ ಜಮೀನು ಒತ್ತುವರಿ ತೆರವು

ಅರಸಿನಮಕ್ಕಿ : ಇಲ್ಲಿಗೆ ಸಮೀಪದ ಬೂಡುಮುಗೇರು ಎಂಬಲ್ಲಿ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡು ಮರಗಳನ್ನು ಕಡಿದು ರಬ್ಬರ್ ಗಿಡಗಳನ್ನು ನೆಟ್ಟು ಕೃಷಿ ಮಾಡಲೆತ್ನಿಸಿದ ಪ್ರಕರಣದಲ್ಲಿ ಸ್ವತಃ ತಹಶೀಲ್ದಾರ್‌ರವರೇ ಸ್ಥಳಕ್ಕೆ ಭೇಟಿ ನೀಡಿ ಬೇಲಿ ಮತ್ತು ಗಿಡಗಳನ್ನು ತೆರವುಗೊಳಿಸಿದ ಘಟನೆ ಜು.15ರಂದು ನಡೆದಿದೆ.

ಬೂಡುಮುಗೇರುವಿನ ನಿವಾಸಿ ಕೃಷ್ಣ ಎಂಬವರು ಅಕ್ರಮವಾಗಿ ಪ್ರವೇಶಿಸಿ ಸುಮಾರು ಒಂದು ಎಕರೆ ಜಾಗದಲ್ಲಿ ಕಳೆದ 2-3 ವರ್ಷಗಳಿಂದ ಹಂತ ಹಂತವಾಗಿ ಬೇಲಿಯನ್ನು ಅಳವಡಿಸಿ ರಬ್ಬರ್ ಗಿಡಗಳನ್ನು ನೆಟ್ಟಿದ್ದರು. ಇದನ್ನು ಆಕ್ಷೇಪಿಸಿ ಸಾರ್ವಜನಿಕರು ಬೆಳ್ತಂಗಡಿಯ ತಹಶೀಲ್ದಾರ್‌ರವರಿಗೆ ದೂರು ನೀಡಿದ್ದರು. ಗೋಮಾಳ ಜಾಗದಲ್ಲಿ ಕೃಷಿ ಮಾಡದಂತೆ ಈ ಹಿಂದೆ ತಹಶೀಲ್ದಾರ್‌ವರು ಸೂಚಿಸಿದ್ದರಾದರೂ ಇದನ್ನು ಕಡೆಗಣಿಸಿ ಮತ್ತೆ ಗಿಡಗಳನ್ನು ನಾಟಿ ಮಾಡಲು ಪ್ರಾರಂಭಿಸಿದ್ದರು.

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಪರಮೇಶ್ ಮತ್ತು ಇತರ ಅಧಿಕಾರಿಗಳ ತಂಡ ಜಾಗಕ್ಕೆ ತೆರಳಿ ಬೇಲಿ ಹಾಗೂ ಗಿಡಗಳನ್ನು ತೆರವುಗೊಳಿಸಿದ್ದಾರೆ. ಯಾವುದೇ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ನಡೆಸಿರುವ ಕಾರ್ಯಾಚರಣೆಗೆ ಗ್ರಾಮಸ್ಥರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.