ರೆಂಕೆದಗುತ್ತು ಬಳಿ ವಿದ್ಯುತ್ ಅವಘಡ: ಓರ್ವ ಮಹಿಳೆ ಸಾವು

ಬೆಳ್ತಂಗಡಿ: ಇಲ್ಲಿಯ ಕಸಬಾ ಗ್ರಾಮದ ರೆಂಕೆದಗುತ್ತು ಬಳಿಮನೆಯೊಂದರ ದನದ ಹಟ್ಟಿಗೆ ಅಳವಡಿಸಿದ್ದ ವಿದ್ಯುತ್ ವಯರ್‌ನಿಂದ ವಿದ್ಯುತ್‌ಶಾಕ್ ತಗುಲಿ ಓರ್ವ ಮಹಿಳೆ ಮೃತಪಟ್ಟ ಘಟನೆ ಜು.17 ರಂದು ತಡರಾತ್ರಿ ನಡೆದಿದೆ.
ರೆಂಕೆದಗುತ್ತು ನಿವಾಸಿ ದಿ| ಸಂಜೀವ ರವರ ಧರ್ಮಪತ್ನಿ ಸುಂದರಿ (55.ವ) ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಮಧ್ಯರಾತ್ರಿ 12.30ರ ಸುಮಾರಿಗೆ ಹಟ್ಟಿಯಲ್ಲಿ ದನ,ಕರುಗಳ ಕೂಗು ಕೇಳಿ ಸುಂದರಿಯವರು ಹಟ್ಟಿಗೆ ಬಂದಿದ್ದು, ಈ ಸಂದರ್ಭದಲ್ಲಿ ಹಟ್ಟಿಗೆ ಅಳವಡಿಸಿದ ವಯರ್‌ನಿಂದ ಕಬ್ಬಿಣದ ಕಂಬದ ಮೂಲಕ ವಿದ್ಯುತ್ ಪ್ರವಹಿಸಿ ಈ ಘಟನೆ ಸಂಭವಿಸಿದೆ. ಕಬ್ಬಿಣದ ಕಂಬವನ್ನು ಹಿಡಿದುಕೊಂಡ ಸುಂದರಿಯವರಿಗೆ ವಿದ್ಯುತ್‌ಶಾಕ್ ತಗುಲಿದ್ದು, ಅವರ ಬೊಬ್ಬೆ ಕೇಳಿ ಮನೆಯವರು ಓಡಿಬಂದು ನೋಡಿದಾಗ ಅದಾಗಲೆ ಸುಂದರಿಯವರು ನೆಲದ ಮೇಲೆ ಬಿದ್ದಿದ್ದರು. ಅವರನ್ನು ತಕ್ಷಣ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಸುಂದರಿಯವರು ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯ ಎಎಸ್‌ಐ ಕಲೈಮಾರ್, ಮೆಸ್ಕಾಂ ಎಇಇ ಶಿವಶಂಕರ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ದಸಂಸ ಮುಖಂಡ, ಬಿಎಸ್ಪಿ ನಾಯಕ ರಮೇಶ್ ಆರ್ ಸೇರಿದಂತೆ ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.