ಜೇಸಿಐ ಬೆಳ್ತಂಗಡಿ ಮಂಜುಶ್ರೀ ಆಶಾಲತಾರಿಗೆ ಅತ್ಯುತ್ತಮ ಜೇಸಿರೇಟ್ ಅಧ್ಯಕ್ಷೆ ರಾಷ್ಟ್ರೀಯ ಪ್ರಶಸ್ತಿ 

ಬೆಳ್ತಂಗಡಿ: ಜು. 13 ಮತ್ತು 14 ರಂದು ಹೈದರಾಬಾದ್‌ನಲ್ಲಿ ನಡೆದ ಉತ್ಸವ್ ಮತ್ತು ಯುವ ಮಹಿಳಾ ಉದ್ಯಮಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಜೇಸಿಐ ಬೆಳ್ತಂಗಡಿಯ ಮಹಿಳಾ ಸಬಲೀಕರಣದ ರಾಷ್ಟ್ರೀಯ ಕಾರ್ಯಕ್ರಮಗಳಾದ ಜೇಸಿರೇಟ್ ವೀಕ್, ಮಹಿಳಾ ಆರೋಗ್ಯ ಸ್ವಚ್ಚತೆಯ ಕಾಲ್ನಡಿಗೆ ಜಾಥಾ, ಮಹಿಳಾ ದಿನಾಚರಣೆ, ಭಾವೈಕ್ಯತಾ ದಿನದ ಆಚರಣೆ, ಮತ್ತು ಹಾಸ್ಟೇಲ್ ಮತ್ತು ಶಾಲಾ ಕಾಲೇಜುಗಳಲ್ಲಿ ನಡೆಸಿರುವ ಆರೋಗ್ಯ ತರಬೇತಿಗಳನ್ನು ಪರಿಗಣಿಸಿ ಬೆಳ್ತಂಗಡಿಯ ಮಹಿಳಾ ಜೇಸಿ ವಿಭಾಗದ ಅಧ್ಯಕ್ಷೆ ಜೇಸಿ ಆಶಾಲತಾ ಪಿ. ಲಾಯಿಲ ಇವರಿಗೆ ಅತ್ಯುತ್ತಮ ಜೇಸಿರೇಟ್ ಮತ್ತು ಮಹಿಳಾ ಜೇಸಿ ಅಧ್ಯಕ್ಷೆ ಎಂಬ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಶಿರೀಷ್ ದುಂಡೊ ಇವರ ಸಮ್ಮುಖದಲ್ಲಿ ರಾಷ್ಟ್ರೀಯ ನಿರ್ದೇಶಕಿ ಜಾಸ್ಮಿನ್ ಕರೀಮ್ ಈ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.
ಈ ಸಂದರ್ಭದಲ್ಲಿ ವಲಯ 15ರ ವಲಯಧ್ಯಕ್ಷ ಅಶೋಕ್ ಚೂಂತಾರು ಜೇಸಿರೇಟ್  ಮತ್ತು ಮಹಿಳಾ ಜೇಸಿ ವಲಯ ನಿರ್ದೇಶಕಿ ಸಂಗೀತಾ ಪ್ರಭು ಮತ್ತು ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.