ಬೆಳ್ತಂಗಡಿ : ಸ್ಕಂದ ಆಗ್ರೋಟೆಕ್ ಸೇಲ್ಸ್ ಮತ್ತು ಸರ್ವೀಸ್ ಇದರ ಶುಭಾರಂಭವು ಎಸ್.ಡಿ.ಎಂ ಹಾಲ್, ಕೆ.ಇ.ಬಿ ರಸ್ತೆ ಹತ್ತಿರ ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಾರಾಯಣ ಪೂಜಾರಿ, ಕಮಲ ಉಜಿರೆ, ವಿಠಲ ಆಚಾರ್ಯ, ಲೀಲಾವತಿ ಮುಂಡೂರು ಉಪಸ್ಥಿತರಿದ್ದರು.
ಆಧುನಿಕ ಕೃಷಿ ಯಂತ್ರೋಪಕರಣ, ಪವರ್ ಟೂಲ್ಸ್ ಹಾಗೂ ಕೃಷಿ ಮತ್ತು ಗಾರ್ಡನಿಂಗ್ ಉಪಕರಣಗಳ ಮಾರಾಟ ಮತ್ತು ಸೇವಾ ಮಳಿಗೆಯಾಗಿದ್ದು ಸಂಸ್ಥೆಯಲ್ಲಿ ಜಲ ಮುರುಪೂರಣ, ಕೊಳವೆ ಬಾವಿ ಮರುಪೂರಣ, ನೀರು ಇಂಗೀಸುವಿಕೆ, ಗಾರ್ಡನಿಂಗ್ ಮತ್ತು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಪ್ರಶಾಂತ್ ಹಾಗೂ ಜಗದೀಶ್ ತಿಳಿಸಿದ್ದಾರೆ.