ಭತ್ತದ ಬೆಳೆಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ

ಬೆಳ್ತಂಗಡಿ: ಮಳೆ ಆಶ್ರಿತ ಭತ್ತದ ಬೆಳೆಗೆ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಲ್ಲಿ ಆಸಕ್ತ ರೈತರು ಅರ್ಜಿಗಳನ್ನು ಸಲ್ಲಿಸಬಹುದು ಎಂದು ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಆಗಸ್ಟ್ 14 ಕೊನೆಯ ದಿನವಾಗಿದೆ. ರೈತರ ಭಾಗ ರೂ.440 ಪ್ರತಿ ಎಕ್ರೆಗೆ ಅಥವಾ ರೂ.1100 ಪ್ರತಿ ಹೆಕ್ಟೇರಿಗೆ. ಅರ್ಜಿ ಜೊತೆ ಪಹಣಿ, ಖಾತೆ, ಪಾಸ್‌ಪುಸ್ತಕ, ಕಂದಾಯ ರಶೀದಿ. ಅಧಾರ್ ಪ್ರತಿ ನೀಡಬೇಕು. ಹೆಚ್ಚಿನ ವಿವಿರಗಳಿಗೆ ಹೋಬಳಿ ರೈತ ಸಂಪರ್ಕ ಕೇಂದ್ರ, ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ಪರಿಹಾರ ಹೇಗೆ: ಬೆಳೆ ಕಟಾವು ಪ್ರಯೋಗಳ ಆಧಾರದ ಮೇಲೆ ಇಳುವರಿ ಮಾಹಿತಿಯನ್ನು ಪರಿಗಣಿಸಿ ಬೆಳೆ ನಷ್ಟ ನಿರ್ಧಾರ ಒಟ್ಟಾರೆ ಪ್ರದೇಶಕ್ಕೆ ಮಾಡಲಾಗುವುದು. ಬಿತ್ತನೆ ವಿಫಲಗೊಂಡಲ್ಲಿ ಮಳೆಯ ಅಭಾವ, ಪ್ರತಿಕೂಲ ಹವಾಮಾನ ಶೇ 75ಕ್ಕಿಂತ ಹೆಚ್ಚಿನ ಕ್ಷೇತ್ರ ವಿಫಲಗೊಂಡಲ್ಲಿ ಶೇ 25 ರಷ್ಟು ಪರಿಹಾರ. ಮಧ್ಯಂತರ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಬೆಂಕಿ ಅವಘಡಗಳಿಗೆ ವೈಯಕ್ತಿಕವಾಗಿ ನಿರ್ಧಾರ, 72 ಗಂಟೆಯೊಳಗೆ ವಿಮಾ ಸಂಸ್ಥೆಗೆ ಮಾಹಿತಿ, ಬಿತ್ತನೆಯಾದ ನಂತರ ಕಟಾವಿಗೆ ಮೊದಲು ಸಾಮಾನ್ಯ ಇಳುವರಿಗಿಂತ ಶೇ 50 ಕ್ಕಿಂತ ಹೆಚ್ಚಿನ ಬೆಳೆ ಹವಾಮಾನ ವೈಪರೀತ್ಯದಿಂದ ನಷ್ಟ ಸಂಭವಿಸಿದಲ್ಲಿ ಶೇ 25 ಮುಂಚಿತವಗಿ ಪರಿಹಾರ, ಬೆಳೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಾಡಿದ 14 ದಿನಗಳ ಒಳಗೆ ಮಳೆ ಮತ್ತು ಆಲಿಕಲ್ಲು ಮಳೆಯಿಂದ ನಷ್ಟ 72 ಗಂಟೆಯೊಳಗೆ ವಿಮಾ ಸಂಸ್ಥೆಗೆ ಮಾಹಿತಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.