ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನ ಬ್ರಹ್ಮಕಲಶೋತ್ಸವ ದಿನ ನಿಗದಿ

ಬ್ರಹ್ಮಕಲಶೋತ್ಸವ ಮತ್ತು ಪ್ರಕೃತಿಯ ಆರಾಧನೆಯಿಂದ ಊರಿಗೆ ಶ್ರೇಯಸ್ಸು: ಜೋಗಿತ್ತಾಯ

ತಣ್ಣೀರುಪಂತ: ಇಲ್ಲಿಯ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಬ್ರಹ್ಮಕಲಶೋತ್ಸವ ದಿನ ನಿಗದಿ ಜು.14 ರಂದು ವೇ.ಮೂ. ಬ್ರಹ್ಮಶ್ರೀ ಕೇಶವ ಜೋಗಿತ್ತಾಯರ ಮಾರ್ಗದರ್ಶನದಲ್ಲಿ ನಡೆಯಿತು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜೋಗಿತ್ತಾಯರು 2020 ಮಾರ್ಚ್ ತಿಂಗಳಲ್ಲಿ ಬ್ರಹ್ಮ ಕಲಶೋತ್ಸವ ನಡೆಯುವುದಾಗಿ ತಿಳಿಸುತ್ತಾ, ವಿವಿಧ ಬಗೆಯ ಸಸಿ ವಿತರಣೆ ಮಾಡಿ, ಗ್ರಾಮದ ದೇವಸ್ಥಾನ, ನಾಗಸನ್ನಿಧಿ, ಜೀರ್ಣೋದ್ಧಾರ ಹಾಗೂ ಪ್ರತಿಷ್ಠೆ ಬ್ರಹ್ಮಕಲಶೋತ್ಸವದಿಂದ ದೇವರ ಸಾನ್ನಿಧ್ಯ ವೃದ್ಧಿಯಾಗಿ, ಗ್ರಾಮದಲ್ಲಿ ಜೊತೆಗೆ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಯಾಗುವುದು. ಮತ್ತು ಪ್ರಕೃತಿಯ ಆರಾಧನೆಯಿಂದ ಜಲ-ನೆಲ ಸಮೃದ್ಧವಾಗಿ ಬೆಳೆಯುವುದರಿಂದ ಶ್ರೇಯಸ್ಸಾಗುತ್ತದೆ ಎಂದು ಹೇಳಿದರು. ತಣ್ಣೀರುಪಂತ ಪಂಚಾಯತ್ ಅಧ್ಯಕ್ಷ ಜಯವಿಕ್ರಮ ಅಧ್ಯಕ್ಷತೆ ವಹಿಸಿ ಪಂಚಾಯತ್ ವತಿಯಿಂದ ಹೈಮಾಸ್ಕ್ ವಿದ್ಯುತ್‌ದೀಪ ಹಾಗೂ ದಾರಿದೀಪಗಳ ವ್ಯವಸ್ಥೆಯನ್ನು ಮಾಡುವ ಮೂಲಕ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು.

ಸಾಲಿಗ್ರಾಮ ವಿವೇಕ ಜಾಗೃತಿ ಬಳಗದ ಪ್ರಚಾರಕ ಗುರುಪ್ರಸಾದ್ ಧಾರ್ಮಿಕ ಉಪನ್ಯಾಸ ನೀಡಿ ಸನಾತನ ಧರ್ಮ, ಸಂಪ್ರದಾಯ, ಆಚರಣೆ, ನಿಯಮಗಳು, ದೈವ ದೇವರ ಆರಾಧನೆಗಳು ಉಳಿಯಬೇಕು ಎಂದು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ವಿಮ ಯೋಜನೆ ನಿರ್ದೇಶಕ ಜಯರಾಮ ನೆಲ್ಲಿತ್ತಾಯರು ಬ್ರಹ್ಮ ಕಲಶೋತ್ಸವದ ಪೂರ್ವ ತಯಾರಿಯ ಬಗ್ಗೆ ಮಾಹಿತಿ ನೀಡಿದರು. ಪುತ್ತೂರು ನೆಲ್ಲಿಕಟ್ಟೆ ಜಗನ್ನಾಥ ಶೆಟ್ಟಿ, ಬಾವಂತಬೆಟ್ಟು ನಿರಂಜನ ಕುಮಾರ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ಸ್ವಾಗತಿಸಿ, ಕ್ಷೇತ್ರದ ಪ್ರಸ್ತಾವನೆಯನ್ನು ಮಾಡಿದರು. ಪ್ರಭಾಕರ ಗೌಡ ಪೊಸಂದೋಡಿ, ಸುರೇಶ ಗೌಡ ಕರ್ಪಾಡಿ, ಸಮಿತಿಯ ಕೋಶಾಧಿಕಾರಿ ಚಂದ್ರಹಾಸ ಪಕಳ, ಸದಸ್ಯರಾದ ದುಗ್ಗಪ್ಪ ಗೌಡ ಪೊಸಂದೋಡಿ, ದಿನೇಶ್ ಗೌಡ ಪೊಸಂದೋಡಿ, ಪೂವಪ್ಪ ಬಂಗೇರ ಅಳಕೆ, ಶ್ರೀಧರ ಪೂಜಾರಿ ಭಟ್ಟಂಡ, ರೋಹಿಣಿ ಪಕಳ, ವಜ್ರ ಕುಮಾರ್ ಅಂತರ, ವಿಷ್ಣು ಭಟ್, ರಂಗಪ್ಪ ಪೂಜಾರಿ, ಸುಜಾತ, ಪದ್ಮರಾಜ ಅಜಿಲರು, ಉದಯ್, ರಂಜಿತ್. ಶಂಕರ್ ಭಟ್, ಉಲ್ಲಾಸ್ ಕೋಟ್ಯಾನ್, ಭರತ್ ಶೆಟ್ಟಿ, ಸೂರಪ್ಪ ಪೂಜಾರಿ, ನವೀನ್ ಚಂದ್ರ ಶೆಟ್ಟಿ, ರಜನಿನಾಥ್, ಶ್ರೀನಿವಾಸ ಗೌಡ, ರಾಘವ ಪೂಜಾರಿ, ದೇವಪ್ಪ ಪೂಜಾರಿ, ಯೋಗೀಶ್ ಅಳಕೆ, ದೇವಸ್ಥಾನದ ವ್ಯವಸ್ಥಾಪಕ ತೀರ್ಥಕುಮಾರ್ ಉಪಸ್ಥಿತರಿದ್ದು ಸಹಕರಿಸಿದರು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಮಿತಿಯ ಉಪಾಧ್ಯಕ್ಷ ಪ್ರಭಾಕರ ಗೌಡ ಪೊಸಂದೊಡಿ ಕಾರ್ಯಕ್ರಮ ನಿರ್ವಹಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಯಪ್ರಕಾಶ ಭಟ್ಟ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.