ಬೆಂಗಳೂರಿನಿಂದ ಬಾಲಕಿ ಶೃತಿ ಶೆಟ್ಟಿ ಮರಳಿ ಊರಿಗೆ

Advt_NewsUnder_1
Advt_NewsUnder_1

ರಾಜಕೇಸರಿ ಸಂಘಟನೆಯಿಂದ ಹೂ ನೀಡಿ ಸ್ವಾಗತ

ಬೆಳ್ತಂಗಡಿ: ಬಿಳಿ ರಕ್ತಕಣ ಸಮಸ್ಯೆಯಿಂದ ಬಳಲುತ್ತಾ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಯಶಸ್ಸು ಕಾಣದ್ದರಿಂದ ರಾಜಕೇಸರಿ ಸಂಘಟನೆ ವಿಶೇಷ ನೆರವಿನೊಂದಿಗೆ ಬೆಂಗಳೂರಿನ ಸೈಂಟ್ ಜಾನ್ಸ್ ಹಾಸ್ಪಿಟಲ್‌ಗೆ ವರ್ಗಾಯಿಸಲ್ಪಟ್ಟಿದ್ದ ಮುಂಡಾಜೆ ಗ್ರಾಮದ ಶೃತಿ ಶೆಟ್ಟಿ 22 ದಿನಗಳಿಂದ ಯಶಸ್ವಿ ಚಿಕಿತ್ಸೆ ಪಡೆದು ಊರಿಗೆ ಮರಳಿದ್ದಾರೆ.


ಪ್ರವೀಣ್ ಉಜಿರೆ ಅವರ ಮೂಲಕ ರಾಜಕೇಸರಿ ಸಂಘಟನೆಗೆ ವಿಚಾರ ಗೊತ್ತಾದಾಗ ಅತ್ಯಂತ ಬಡತನದ ಹಿನ್ನೆಲೆ ಇರುವ ಈ ಕುಟುಂಬದ ನೆರವಿಗೆ ನಿಂತು ಚಿಕಿತ್ಸೆಗೆ ಸಹಕಾರ ನೀಡಿದೆ. ಈಗಾಗಲೇ ಆಕೆಯ ಚಿಕಿತ್ಸೆಗಾಗಿ ನೀರಿನ ಬಾಟಲಿಯನ್ನೂ ಮಾರಾಟ ಮಾಡಿ ಅದರ ಉಳಿಕೆ ಹಣವನ್ನೂ ಆಕೆಯ ಚಿಕಿತ್ಸೆಗೆ ನೀಡಲಾಗಿತ್ತು. ಬೆಂಗಳೂರಿನಲ್ಲೂ ಕೂಡ ಅನೇಕ ಮಂದಿ ಶೃತಿ ಅವರಿಗೆ ನೆರವು ನೀಡಿದ್ದಾರೆ. ಜು. 15 ರಂದು ಬೆಳಿಗ್ಗೆ 4.30 ಕ್ಕೆ ಊರಿಗೆ ಮರಳುವ ಬೆಂಗಳೂರು ಬಸ್ಸಿನಿಂದ ಶೃತಿ ಶೆಟ್ಟಿ ಅವರು ಇಳಿಯುವ ವೇಳೆ ಉಪಸ್ಥಿತರಿದ್ದ ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ, ಪ್ರವೀಣ್ ಉಜಿರೆ, ಲೋಕೇಶ್ ಕುತ್ಲೂರು ಇವರುಗಳು ಬಾಲಕಿಗೆ ಹೂ ನೀಡಿ ಬರಮಾಡಿಕೊಂಡು ಆಕೆಯ ಬಾಳಿನಲ್ಲಿ ಭರವಸೆ ತುಂಬುವ ಕಾರ್ಯ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.