HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವಾಣಿ ಅಂಗ್ಲ ಮಾಧ್ಯಮ ಶಾಲಾ ವಿಧ್ಯಾರ್ಥಿನಿ ಚಿಕಿತ್ಸೆಗೆ ಧನಸಹಾಯ

ಬೆಳ್ತಂಗಡಿ : ವಾಣಿ ಅಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿಯ, ಕೊಯ್ಯೂರು ಗ್ರಾಮದ ವಿಧ್ಯಾರ್ಥಿನಿ ಬೇಬಿ ವಂಶಿ ಚಿಕಿತ್ಸೆಗೆ ಧನಸಹಾಯವನ್ನು ಜು.15 ರಂದು ವಿತರಿಸಲಾಯಿತು.

ಕಳೆದ ಸುಮಾರು 6 ತಿಂಗಳಿನಿಂದ ಮೆದುಳಿನ ಕ್ಯಾನ್ಸರ್ ನಿಂದ ಬಳಸುತ್ತಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗೊಂಡಿದ್ದು ಈಗಾಗಲೇ ಸುಮಾರು 8 ಲಕ್ಷ ರೂಪಾಯಿ ವೆಚ್ಚವನ್ನು ಚಿಕಿತ್ಸೆಗಾಗಿ ಪೋಷಕರು ಖರ್ಚು ವೆಚ್ಚವನ್ನು ಭರಿಸಿರುತ್ತಾರೆ. ಇನ್ನು ಮುಂದೆ 2 ವರ್ಷಗಳ ಕಾಲ ರೇಡಿಯೇಶನ್ ಹಾಗೂ ಕೀಮೋಥೆರಪಿ ಅಗತ್ಯವಿದ್ದು ಚಿಕಿತ್ಸೆಗಾಗಿ 8 ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಹಣದ ಅವಶ್ಯಕತೆ ಇದೆ.ವಾಣಿ ಶಿಕ್ಷಣ ಸಂಸ್ಥೆಗಳು,ಪೋಷಕ ವೃಂದ, ಶಿಕ್ಷಕ ವೃಂದ, ವಾಣಿ ಶಿಕ್ಷಣ ಸಂಸ್ಥೆಯ ಅಡಳಿತ ಮಂಡಳಿ, ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮತ್ತು ಅಡಳಿತ ಮಂಡಳಿಯ ಪದಾಧಿಕಾರಿಗಳು ಸಂಗ್ರಹಿಸಿದ 1,64,850 ರೂಪಾಯಿ ನಗದು ಹಣವನ್ನು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಸೋಮೇ ಗೌಡ ಜಿ ಮತ್ತು ಪದಾಧಿಕಾರಿಗಳು, ಮಗುವಿನ ಹೆತ್ತವರಾದ ಲೋಕೇಶ್ ಗೌಡ ಪಾಂಬೇಲು ಇವರಿಗೆ ಹಸ್ತಾಂತರಿಸಿ ಶೀಘ್ರವಾಗಿ ಗುಣಮುಖವಾಗಲಿ ಎಂದು ಹಾರೈಸಿದರು.

                                                                                                                                                       ವರದಿ.ಕೆ.ಎನ್.ಗೌಡ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.