HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಗುರುವಾಯನಕೆರೆ ಮರಾಠಿ ಸಮಾಜ ಸಂಘದ ಸದಸ್ಯರಿಂದ ಸ್ವಚ್ಚ ಭಾರತ್ ಅಭಿಯಾನ

ಗುರುವಾಯನಕೆರೆ: ಇಲ್ಲಿಯ ಮರಾಠಿ ಸೇವಾ ಸಂಘ ಇದರ ವತಿಯಿಂದ 18ನೇ ವರ್ಷದ ಅಂಗವಾಗಿ ಗುರುವಾಯನಕೆರೆ ಸಮೀಪದ ಕೆರೆ ದಂಡೆಯ ಮೇಲಿರುವ ಗಿಡಗಂಟಿ, ಪ್ಲಾಸ್ಟಿಕ್ ಮತ್ತು ಕಸ ಕಡ್ಡಿಗಳನ್ನು ತೆರವು ಗೊಳಿಸುವ ಮೂಲಕ ಜು.14 ರಂದು ಆಚರಿಸಲಾಯಿತು.

ಸಂಘದ ಅಧ್ಯಕ್ಷ ಶೇಕರ ನಾಯ್ಕ ಗೇರುಕಟ್ಟೆ ಇವರು ನೇತೃತ್ವ ವಹಿಸಿದ್ದರು. ಕುವೆಟ್ಟು ಪಂಚಾಯತ್ ಅಧ್ಯಕ್ಷ ಅಶೋಕ ಕೊಟ್ಯಾನ್ ಸ್ವಚ್ಚತಾ ಭಾರತ್ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಗುರುವಾಯನಕೆರೆ ಮರಾಠಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಸ್ವಚ್ಚತಾ ಭಾರತ್ ಆಂದೋಲನದಡಿ ಕಾರ್ಯಕ್ರಮವನ್ನು ಕುವೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಂಡು ಶ್ರಮಿಸುವ ಸಂಘದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಸಂಘಕ್ಕೆ ಶುಭಾ ಹಾರೈಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ  ದುರ್ಗಾವತಿ, ಜತೆ ಕಾರ್ಯದರ್ಶಿ ದಿನೇಶ ನಾಯ್ಕ ಗೇರುಕಟ್ಟೆ, ಗಣೇಶ್ ನಾಯ್ಕ ಬದ್ಯಾರ್,ಕೊರಗಪ್ಪ ನಾಯ್ಕ, ಸಂಜೀವ ನಾಯ್ಕ ಕಡಂಬು, ನಾಗೇಶ್ ನಾಯ್ಕ ಶಕ್ತಿ ನಗರ, ಪುರಂದರ ನಾಯ್ಕ ಪಕ್ಕಿದಕಲ, ಸುಕೇಶ್ ನಾಯ್ಕ ಗೇರುಕಟ್ಟೆ, ವಸಂತ ನಾಯ್ಕ ಗೇರುಕಟ್ಟೆ, ಚಂದ್ರಶೇಖರ ನಾಯ್ಕ ಗೇರುಕಟ್ಟೆ, ಗಂಗಯ್ಯ ನಾಯ್ಕ,ಸಂಕೇತ್ ನಾಯ್ಕ,ಕೃಷ್ಣಪ್ಪ ಕೆಲ್ಲಕೆರೆ,ಮಂಜುನಾಥ್, ನವೀನ್ ನಾಯ್ಕ,ಶ್ರೀಮತಿ ಜಯಂತಿ ದಿವಾಕರ,ಮೋಹನ್ ಬದ್ಯಾರು,ಹರೀಶ್ ಶಕ್ತಿ ನಗರ,ಯೋಗಿಶ್ ಗುರುವಾಯನಕೆರೆ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊರಗಪ್ಪ ನಾಯ್ಕ ಸ್ವಾಗತಿಸಿದರು. ಗಣೇಶ್ ನಾಯ್ಕ ಧನ್ಯವಾದವಿತ್ತರು.

                                                                                                                                                       ವರದಿ.ಕೆ.ಎನ್.ಗೌಡ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.