ಬೆಳ್ತಂಗಡಿ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್

41 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ

ಬೆಳ್ತಂಗಡಿ; ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಜು.13 ರಂದು ನಡೆದ ಲೋಕ ಅದಾಲತ್‌ನಲ್ಲಿ 41 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ರಾಜಿ ಸಂಧಾನದಲ್ಲಿ ಇತ್ಯರ್ಥಗೊಂಡಿರುತ್ತದೆ.
ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಧೀಶ ನಾಗೇಶಮೂರ್ತಿ ಬಿ. ಕೆ ಅವರ ನ್ಯಾಯಾಲಯದಲ್ಲಿ9 ಸಿವಿಲ್ ಮತ್ತು11 ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಗೊಳಿಸಲಾಯಿತು. ವಕೀಲ ಸಂಧಾನಕಾರರಾಗಿ ನ್ಯಾಯವಾದಿ ಆನಂದ ಕುಮಾರ್ ಎಂ.ಸಿ ಕಾರ್ಯ ನಿರ್ವಹಿಸಿದ್ದರು.
ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಧೀಶ ಕೆ. ಎಂ ಆನಂದ್ ಅವರ ನ್ಯಾಯಾಲಯದಲ್ಲಿ 2 ಸಿವಿಲ್ ಮತ್ತು ೮ ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಗೊಳಿಸಲಾಯಿತು. ವಕೀಲ ಸಂಧಾನಕಾರರಾಗಿ ನ್ಯಾಯವಾದಿ ಮುಮ್ತಾಝ್ ಬೇಗಂ ಕಾರ್ಯ ನಿರ್ವಹಿಸಿದ್ದರು.
ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಸತೀಶ್ ಕೆ. ಜಿ ಅವರ ನ್ಯಾಯಾಲಯದಲ್ಲಿ 10ಸಿವಿಲ್ ಮತ್ತು 1 ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಗೊಳಿಸಲಾಯಿತು. ವಕೀಲ ಸಂಧಾನಕಾರರಾಗಿ ನ್ಯಾಯವಾದಿ ಪ್ರಿಯಾಂಕಾ ಅವರು ಕಾರ್ಯ ನಿರ್ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.