ಕನ್ಯಾಡಿ ರಾಮ ಕ್ಷೇತ್ರದಲ್ಲಿ ಗುರು ವಂದನೆ, ಗುರು ಪೂಜೆ, ಆಶೀರ್ವಚನ

ಉಜಿರೆ: ಅಜ್ಞಾನದ ಅಂಧಕಾರವನ್ನು ತೊಲಗಿಸಿ, ಸುಜ್ಞಾನದ ಸುಗಂಧವನ್ನು ಪಸರಿಸಿ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಮಾರ್ಗದರ್ಶನ ನೀಡುವಾತನೇ ಗುರು. ಗುರು ಪೂರ್ಣಿಮೆ ಧರ್ಮ ಜಾಗೃತಿ ಮಾಡುವ ಪರ್ವವಾಗಿದೆ ಎಂದು ಕನ್ಯಾಡಿ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಗುರು ಪೂರ್ಣಿಮೆ ಅಂಗವಾಗಿ ಇಂದು(ಜು.16) ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ರಾಮ ಕ್ಷೇತ್ರದಲ್ಲಿ ಪಾದ ಪೂಜೆ, ಗುರು ವಂದನೆ ಬಳಿಕ ಅವರು ಆಶೀರ್ವಚನ ನೀಡಿದರು.

ಭಕ್ತರಿಂದ ಭಜನೆ, ಪ್ರಾರ್ಥನೆ, ನವಗ್ರಹ ಶಾಂತಿ, ಹೋಮ, ಸ್ವಾಮೀಜಿಯವರ ಪಾದಪೂಜೆ, ಕಿರೀಟಧಾರಣೆ ಮೊದಲಾದ ಕಾರ್ಯಕ್ರಮಗಳು ನಡೆದವು. ಮೂಡಬಿದ್ರೆಯ ಜೋತಿಷಿ ವೆಂಕಟೇಶ ಕಿಣಿ ಮಾತನಾಡಿ ಗುರು ಪೂರ್ಣಿಮೆಯ ಆಚರಣೆಯ ಮಹತ್ವವನ್ನು ವಿವರಿಸಿದರು.

ಸುಜಿತಾ ವಿ. ಬಂಗೇರ, ಪೀತಾಂಬರ ಹೇರಾಜೆ, ಚಿತ್ತರಂಜನ್ ಗರೋಡಿ, ಜಯಂತ ಕೋಟ್ಯಾನ್, ಬೆಳಾಲು ತಿಮ್ಮಪ್ಪ ಗೌಡ, ಭುಜಬಲಿ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಸ್ವಾಗತಿಸಿದ ಪ್ರೊ. ಕೇಶವ ಬಂಗೇರ ಕೊನೆಯಲ್ಲಿ ಧನ್ಯವಾದವಿತ್ತರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.