HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಭಿಡೆ ಪ್ರತಿಷ್ಠಾನದ ವತಿಯಿಂದ ಉಪೇಂದ್ರ ಭಿಡೆಯವರಿಗೆ ಸನ್ಮಾನ

ಬೆಳ್ತಂಗಡಿ: ಭಿಡೆ ಪ್ರತಿಷ್ಠಾನದ ದಶಮಾನೋತ್ಸವದ ಪ್ರಯುಕ್ತ ಬೆಂಗಳೂರಿನ ಸುಬ್ರಮಣ್ಯನಗರದಲ್ಲಿ ನಡೆದ ಮೀನಾಕ್ಷಿಬಾಯಿ ಮತ್ತು ಎನ್.ಎಂ.ಭಿಡೆ ಯವರ ನೆನಪಿನ ಸಾಧಕರನ್ನು ಗುರುತಿಸಿ ನಡೆದ ಪುರಸ್ಕಾರ ಕಾರ್ಯಕ್ರಮದಲ್ಲಿ ತಮ್ಮ 63ನೇ ಇಳಿವಯಸ್ಸಿನಲ್ಲಿ ಹೆಚ್.ಆರ್‌ನಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆದ ಉಪೇಂದ್ರ ಭಿಡೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ , ಸರ್ವೋದಯ ಹಿರಿಯ ನಾಗರಿಕರ ವೇದಿಕೆ ಕಾರ್ಯದರ್ಶಿ ಬಾಬು ಸುರೇಶ್, ಕಿರಣ್ ಘೌಂಡೇಶನ ಸಂಸ್ಥಾಪಕ ಅಧ್ಯಕ್ಷೆ ರಶ್ಮಿ ರವಿಕಿರಣ್, ಚಿತ್ಪಾವನ ಸಮಾಜದ ಅಧ್ಯಕ್ಷ ಗಣಪತಿ ಜೋಶಿ ಹಾಗೂ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಅರುಣ್ ಭಿಡೆ ಉಪಸ್ಥಿತರಿದ್ದರು.
ಉಪೇಂದ್ರ ಭಿಡೆಯವರು ಬೆಳ್ತಂಗಡಿ ತಾಲೂಕು ಹೊಸ್ತೋಟ ಗ್ರಾಮದ ದಿ| ಶ್ರೀಮತಿ ಮತ್ತು ಎಲ್.ಕೆ.ಭಿಡೆ ದಂಪತಿ ಪುತ್ರರಾಗಿದ್ದು, ಬೆಂಗಳೂರಿನಲ್ಲಿ ಪ್ರತಿಷ್ಠಿತ ಎಂಬಿಎ ಕಾಲೇಜುಗಳಲ್ಲಿ ವಿಸಿಟಿಂಗ್ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.