ಗೆಜ್ಜೆಗಿರಿ ಕ್ಷೇತ್ರದಿಂದ ಎರಡನೇ ಹಂತದ ಮನೆ ಭೇಟಿ ಅಭಿಯಾನ

Advt_NewsUnder_1
Advt_NewsUnder_1

ಬೆಳ್ತಂಗಡಿ: ದೇಯಿ ಬೈದ್ಯೆತಿ- ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಕ್ಷೇತ್ರದ ವತಿಯಿಂದ ಬೆಳ್ತಂಗಡಿ ತಾಲೂಕಿನಲ್ಲಿ 2ನೇ ಹಂತದ ಮನೆ ಭೇಟಿ ಕಾರ್ಯಕ್ರಮ ಜು.13ರಂದು ನಡೆಯಿತು.
ತಾಲೂಕಿನ ಕಾಶಿಪಟ್ಣ, ಪೆರಾಡಿ ಮತ್ತು ಸಾವ್ಯ ಗ್ರಾಮಗಳಲ್ಲಿ ಕ್ಷೇತ್ರದ ಭಕ್ತರ ಮನೆಗಳಿಗೆ ತೆರಳಿ, ಕ್ಷೇತ್ರದಲ್ಲಿ ಧರ್ಮಚಾವಡಿ, ಮೂಲಸ್ಥಾನ ಗರಡಿ, ಬೆರ್ಮೆರ್ ಗುಂಡ, ಸರೋಳಿ ಸೈಮಂಜ ಕಟ್ಟೆ, ಆದಿ ದೈವ ಧೂಮಾವತಿ ಸ್ಥಾನ, ಪಂಜುರ್ಲಿ, ಕಲ್ಲಾಲ್ದಾಯ, ಕೊರತಿ ಸಾನಿಧ್ಯಗಳ ಪುನರುತ್ಥಾನ ಕಾರ್ಯ ಅಂತಿಮ ಹಂತದಲ್ಲಿದ್ದು, ಭಕ್ತರ ಸಹಕಾರ ಕೋರಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ 75 ಕುಟುಂಬಗಳು ಕ್ಷೇತ್ರದ ಆಜೀವ ಸದಸ್ಯರಾದರು.

ಗೆಜ್ಜೆಗಿರಿ ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ, ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಕಾರ್ಯದರ್ಶಿ ಸುಧಾಕರ ಸುವರ್ಣ, ಧೂಮಾವತಿ ಕರಸೇವಾ ಸಮಿತಿಯ ಚಂದ್ರಶೇಖರ ಪರಕ್ಕಮೆ, ಕೇಂದ್ರ ಸಮಿತಿ ಸದಸ್ಯ ನಾರಾಯಣ ಪೂಜಾರಿ ಮಚ್ಚಿನ, ಬೆಳ್ತಂಗಡಿ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ನಾವರ, ಬೆಳ್ತಂಗಡಿ ಎಪಿಎಂಸಿ ಸದಸ್ಯರಾದ ಶುಭಕರ ಪೂಜಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್ ಕಾಶಿಪಟ್ಣ , ಮೂಡುಬಿದ್ರೆ ಬಿಲ್ಲವ ಸಂಘದ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ, ಪ್ರಮುಖರಾದ ದಿನೇಶ್ ಕೋಟ್ಯಾನ್, ಪುತ್ತಿಲಗುತ್ತು ವಸಂತ ಕೋಟ್ಯಾನ್, ಹಿತೇಶ್ ಪೂಜಾರಿ, ರಮೇಶ್ ಪೂಜಾರಿ, ಸುಶಾಂತ್ ಪೂಜಾರಿ, ರವಿ ಪೂಜಾರಿ, ಹರಿಣಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.