ಉಜಿರೆ: ಜೆ.ಕೆ `ಲೈಟ್ಸ್’ ಎಲೆಕ್ಟ್ರೋನಿಕ್ಸ್-ಫರ್ನಿಚರ್ ಮಳಿಗೆ ಉದ್ಘಾಟನೆ

ಉಜಿರೆ: ಇಲ್ಲಿಯ ಕಾಲೇಜು ರಸ್ತೆಯ ಎಸ್.ಡಿ.ಎಂ ನ್ಯಾಚುರೋಪತಿ ಕಾಲೇಜು ಹತ್ತಿರದ ಕೃಷ್ಣ ಸಂಪಿಗೆ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ `ಜೆ.ಕೆ ಲೈಟ್ಸ್’ ಎಲೆಕ್ಟ್ರೋನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆ ಜು.15ರಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್‌ಕೃಷ್ಣ ಪಡ್ವೆಟ್ನಾಯ ದೀಪ ಬೆಳಗಿಸಿ ಉದ್ಘಾಟಿಸಿ, ಬೆಳಯುತ್ತಿರುವ ಉಜಿರೆ ನಗರಕ್ಕೆ ಇಂತಹ ಉದ್ಯಮಗಳು ಅಗತ್ಯವಿದ್ದು, ಇದರ ಸದುಪಯೋಗವನ್ನು ತಾಲೂಕಿನ ನಾಗರಿಕರು ಪಡೆದುಕೊಳ್ಳುವಂತೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ರಾಜೇಶ್ ಶೆಟ್ಟಿ ನವಶಕ್ತಿ ಕೃಪಾ ಶಕ್ತಿನಗರ, ಕಿರಿಯಾಡಿ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಕೃಷ್ಣ ಸಂಪಿಗೆತ್ತಾಯ, ಮಂಗಳೂರು ತೆರಿಗೆ ತಪಾಸಣಾ ನಿರೀಕ್ಷಕ ಯತೀಶ್ ಸಿರಿಮಜಲು ಭಾಗವಹಿಸಿ ಶುಭ ಕೋರಿದರು.


ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಹಳೆಕೋಟೆ ಸಾಯಿ ಮಂದಿರದ ಸಿ.ಹೆಚ್ ಪ್ರಭಾಕರ್, ಅನಿತಾ ಫೆರ್ನಾಂಡೀಸ್ ಗುರುವಾಯನಕೆರೆ, ಗಂಗಾಧರ ಪರಾರಿ, ಶ್ರೀಮತಿ ಕಮಲ ಜನಾರ್ದನ, ತಿಲಕ್‌ರಾಜ್ ದಂಪತಿಗಳುವ, ಉಜಿರೆ ಪರಿಸರದ ನಾಗರಿಕರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಹರ್ಷರಾಜ್ ದಂಪತಿಗಳು ಆಗಮಿಸಿದ ಗಣ್ಯರು-ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು. ಸಂಸ್ಥೆಯಲ್ಲಿ ವಿವಿಧ ವಿನ್ಯಾಸದ ಶೋ ಲೈಟ್ಸ್, ಡೆಕೋರೇಟರ್ ಲೈಟ್ಸ್, ಪೆನಾಲ್ ಲೈಟ್ಸ್, ವಿವಿಧ ಕಂಪೆನಿಗಲ ಫ್ಯಾನ್‌ಗಳು, ಮಿಕ್ಸಿಗಳು, ವಿವಿಧ ಬಗೆಯ ಫರ್ನಿಚರ್‌ಗಳು ಲಭ್ಯವಿದೆ ಎಂದು ತಿಲಕ್‌ರಾಜ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.