HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ: ಶಿಲಾ ಕಲ್ಲಿನ ವಾಹನದ ಮೆರವಣಿಗೆ

ರೂ.1.5 ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರ

ತೋಟತ್ತಾಡಿ ; ಇಲ್ಲಿಯ ಇತಿಹಾಸ ಪ್ರಸಿದ್ದ ದೇವಸ್ಥಾನ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕೆಲಸಗಳು ಭರದಿಂದ ನಡೆಯುತ್ತಿದೆ. ಹೊಯ್ಸಳ ರಾಜರಿಂದ ನಿರ್ಮಿಸಲ್‌ಪಟ್ಟಿರುವ ಈ ದೇವಾಲಯಕ್ಕೆ ಸುಮಾರು 900ರಿಂದ ಒಂದು ಸಾವಿರ ವರ್ಷಗಳ ಇತಿಹಾಸವಿದೆ.
ಕಾಲಕ್ರಮೇಣ ಹೊಯ್ಸಳರ ಆಡಳಿತದ ನಂತರ ಬೈಲಂಗಡಿ ಅರಸರ ಆಡಳಿತಕ್ಕೊಳಪಟ್ಟಿತು ಎಂದು ಇತಿಹಾಸದಲ್ಲಿದೆ. ಶ್ರೀ ಸೋಮನಾಥೇಶ್ವರ ದೇವಸ್ಥಾನವು ಬೈಲಂಗಡಿ ಸೋಮಲಾದೇವಿಯವರಿಂದ ಮತ್ತೆ ಜೀರ್ಣೋದ್ಧಾರಗೊಂಡು ಸಂಪೂರ್ಣ ಶಿಲಾಮಯ ದೇವಸ್ಥಾನವಾಗಿ ರೂಪುಗೊಂಡಿತು.

ಬೈಲಂಗಡಿ ಅರಸರ ಕಾಲಾನಂತರ ಪೂಜೆ ಪುರಸ್ಕಾರ ನಿಂತು, ಕಾಡು ಬೆಳೆದುಕೊಂಡಿತು. ಹೀಗೆ ಆ ಸ್ಥಳದಲ್ಲಿ ಕಾಡು ಕಡಿದು ಭಜನಾ ಮಂಡಳಿ ರಚಿಸಿಕೊಂಡು, ಭಜನಾ ತಂಡ ಬೆಳೆದು ನಂತರ ಊರಿನ ಭಕ್ತರು ಒಟ್ಟು ಸೇರುವುದಕ್ಕಾಗಿ ಪ್ರಾರಂಭಿಸಿ, ಭಜನಾ ವಾರ್ಷಿಕೋತ್ಸವ,ಶಿವರಾತ್ರಿ ಉತ್ಸವ ನಡೆದು, ದೇವಸ್ಥಾನದ ಜೀರ್ಣೊದ್ಧಾರಕ್ಕೆ ನಿರ್ಧರಿಸಿ ಸ್ಥಳ ಪ್ರಶ್ನೆಗಳನ್ನಿಟ್ಟು, ಈಗ ಆ ಪ್ರಕಾರ ಜೀರ್ಣೋದ್ಧಾರಗಳು ನಡೆದು ಜು .14ರಂದು ಶ್ರೀ ಕ್ಷೇತ್ರ ಕಾರ್ಕಳದಿಂದ ದೇವಸ್ಥಾನದ ಗರ್ಭಗುಡಿಯ ಶಿಲಾ ಮೆರವಣಿಗೆ ಚಿಬಿದ್ರೆ ಗ್ರಾಮದಿಂದ ಊರಿನ ಅಪಾರ ಸಂಖ್ಯೆಯ ಭಕ್ತರು ದ್ವಿಚಕ್ರ ಹಾಗೂ ಇತರ ವಾಹನಗಳ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಲುಪಿಸಿ ಶಿಲೆಗಳಿಗೆ ಪೂಜಾ ವಿಧಿಗಳು ನಡೆಯಿತು.

ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು ಮಾಜಿ ಶಾಸಕ ಕೆ.ವಸಂತ ಬಂಗೇರ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷತೆ ವಹಿಸಿದ್ದಾರೆ. 2020-21 ಮಧ್ಯದಲ್ಲಿ ಜೀರ್ಣೋದ್ಧಾರ ಪೂರ್ಣಗೊಂಡು ಬ್ರಹ್ಮಹಲಶೋತ್ಸವ ನಡೆಯಲಿದೆ ಎಂದು ಆಡಳಿತ ಸಮಿತಿಯ ಅಧ್ಯಕ್ಷ ಪಿತ್ತಿಲು ಚನನಗೌಡ ಮತ್ತು ಕಾರ್ಯದರ್ಶಿ ಸನತ್  ಕುಮಾರ್ ಪತ್ರಿಕೆಗೆ ಮಾಹಿತಿ ನೀಡಿದರು. ಒಂದು ವರ್ಷದೊಳಗೆ ಬ್ರಹ್ಮಕಲಶೋತ್ಸವ ಆಗಬೇಕು ಎಂದು ಗೌರವಾಧ್ಯಕ್ಷ ಕೆ.ವಸಂತ ಬಂಗೇರರ ಆಶಯ. ಶಿಲಾ ಮೆರವಣಿಗೆಯಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಪಿತ್ತಿಲು ಚನನಗೌಡ ಕಾರ್ಯದರ್ಶಿ ಸನತ್  ಕುಮಾರ್, ಗ್ರಾ.ಪಂ ಸದಸ್ಯ ದೇಜಪ್ಪ ಪೂಜಾರಿ ವಳಸಾರಿ ಹಾಗೂ ಇತರ ಸಮಿತಿ ಸದಸ್ಯರು ಭಾಗವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೂರ್ಜೆ ಕೃಷ್ಣಶೆಟ್ಟಿ, ಕಾರ್ಯದರ್ಶಿ ಪಾದೆ ಬಾಲಕೃಷ್ಣಗೌಡ, ಸದಸ್ಯರು ಉಪಸ್ಥಿತರಿದ್ದರು.
ಭಜನಾ ಮಂಡಳಿಯ ಅಧ್ಯಕ್ಷ ಪರಾರಿ ಚಂದ್ರ ಶೇಖರಗೌಡ, ಕಾರ್ಯದರ್ಶಿ ದಿನೇಶ್ ಸಮಿತಿ ಸದಸ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಊರ-ಪರಊರ ಭಕ್ತರು ಪಾಲ್ಗೊಂಡರು. ಚಿಬಿದ್ರೆಯಲ್ಲಿ ಶಿಲಾಕಲ್ಲಿನ ವಾಹನಕ್ಕೆ ಪೂಜೆ ಹಾಗೂ ಸಂಕಲ್ಪದ ನೇತೃತ್ವವನ್ನು ಅರ್ಚಕ ದಿವಾಕರ್ ಭಟ್ ವಹಿಸಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.