ಉಜಿರೆಯಲ್ಲಿ ಕುಬಣೂರು ಸಂಸ್ಮರಣೆ; ಸನ್ಮಾನ; ಯಕ್ಷಗಾನ ಪ್ರದರ್ಶನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಭಾಗವತ ಕುಬಣೂರು ಶ್ರೀಧರರಾಯರದು ಅತ್ಯಂತ ಸರಳ ಜೀವನ, ಆದರ್ಶ ನಡೆ ನುಡಿ, ಹಿತಮಿತ ಹಾಡುಗಾರಿಕೆಯಿಂದ ಭಾಗವತಿಕೆಯಲ್ಲಿ ತನ್ನದೆ ಗಾಂಭೀರ್ಯ ಉಳಿಸಿಕೊಂಡವರು. ರಾಗ ಶುದ್ಧಿ, ಭಾವ ತನ್ಮಯತೆಯಿಂದ ಯಕ್ಷಗಾನ ಕ್ಷೇತ್ರದಲ್ಲಿ ಶಾಶ್ವತ ಸ್ಥಾನ ಪಡೆದ ಅವರ ನೆನಪು ಅಚ್ಚಳಿಯದೆ ಸ್ಥಿರವಾಗಿ ಉಳಿದಿದೆ. ಅವರು ಸದಾ ಸ್ಮರಣೀಯರು ಎಂದು ಹಿರಿಯ ಯಕ್ಷಗಾನ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಹೇಳಿದರು.
ಅವರು ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಜನಾರ್ದನ ಸ್ವಾಮಿ ಯಕ್ಷ ಕಲಾ ವೇದಿಕೆಯ ನೇತೃತ್ವದಲ್ಲಿ ನಡೆದ ಕುಬಣೂರು ಸಂಸ್ಮರಣೆ ಕಾರ್ಯಕ್ರಮದಲ್ಲಿ ಅಗಲಿದ ಭಾಗವತ ಕುಬಣೂರು ಶ್ರೀಧರ ರಾವ್ ಅವರನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಶುಭಾಶಂಸನೆಗೈದು ಉಜಿರೆಯಲ್ಲಿ ಯಕ್ಷಗಾನ ಕಲೆ ಮತ್ತು ಕಲಾವಿದರಿಗೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸಿದವರಲ್ಲಿ ಕೆ.ವಿ. ಮುಚ್ಚಿನ್ನಾಯ ಮತ್ತು ಹರಿದಾಸ ಭಟ್ ಮೊದಲಿಗರು ಎಂದರು. ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಮತ್ತು ಡಾ. ಎಂ.ಎಂ. ದಯಾಕರ್ ಉಜಿರೆಯಲ್ಲಿ ಯಕ್ಷಗಾನ ಕಲೆಗೆ ನಿರಂತರ ಪ್ರೋತ್ಸಾಹ ದೊರೆಯುತ್ತಿದೆ ಎಂದು ಶ್ಲಾಘಿಸಿ ಶುಭಕೋರಿದರು.
ಇದೇ ಸಂದರ್ಭದಲ್ಲಿ ಯಕ್ಷಗಾನ, ಪುರಾಣ ವಾಚನ, ಗಮಕ ಕಲೆಯಲ್ಲಿ ಪ್ರಾವೀಣ್ಯತೆ ಪಡೆದ ಜಯರಾಮ ಕುದ್ರೆತ್ತಾಯ ಅವರನ್ನು ರಾಜಾರಾಮ ಶರ್ಮ ಅಭಿನಂದಿಸಿ ಗಣ್ಯ ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ದಿನೇಶ್ ರಾವ್ ಬಳಂಜ ಸನ್ಮಾನ ಪತ್ರ ವಾಚಿಸಿದರು. ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ಯಕ್ಷಗಾನ ಗುರು ಮೋಹನ ಬೈಪಾಡಿತ್ತಾಯರಿಗೆ ಗುರುವಂದನೆ ಸಲ್ಲಿಸಿದರು.
ರಾಮಕೃಷ್ಣ ಬೆಳಾಲು ಸ್ವಾಗತಿಸಿ, ರಾಮಕೃಷ್ಣ ಭಟ್ ಬಳಂಜ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಚಾಲಕ ವೆಂಕಟ್ರಮಣ ರಾವ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.