ಶ್ರೀ ಜನಾರ್ದನ ಸ್ವಾಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಹಾಸಭೆ

Advt_NewsUnder_1
Advt_NewsUnder_1

ಉಜಿರೆ ಶ್ರೀ ಜನಾರ್ದನ ಸೊಸೈಟಿ ಮಹಾಸಭೆ : ರೂ. 14.26 ಲಕ್ಷ ಲಾಭ

ಉಜಿರೆ : 2013ರಲ್ಲಿ ಪ್ರಾರಂಭಗೊಂಡ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ.) 2018-19ನೇ ಲೆಕ್ಕಪರಿಶೋಧನಾ ಸಾಲಿನಲ್ಲಿ ರೂ 28.93 ಲಕ್ಷ ಪಾಲು ಬಂಡವಾಳ ಹಾಗೂ ರೂ. 6.42ಕೋಟಿ ಠೇವಣಿ, ರೂ.4.82ಕೋಟಿ ಹೊರ ಬಾಕಿ ಸಾಲ ಹೊಂದಿದ್ದು, ರೂ.14.26 ಲಕ್ಷ ನಿವ್ವಳ ಲಾಭ ಹೊಂದಿ ಸದಸ್ಯರಿಗೆ ಶೇ.15 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಗಂಗಾಧರ ರಾವ್ ಎಸ್. ಕೆವುಡೇಲು ಹೇಳಿದರು.
ಅವರು ಜು. 13 ರಂದು ಉಜಿರೆ ಶ್ರೀ ಅರಿಪ್ಪಾಡಿ ಮಠದ ಕಲಾಭವನದಲ್ಲಿ ನಡೆದ ಶ್ರೀ ಜನಾರ್ದನ ಸ್ವಾಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಪ್ರಗತಿಯ ಮಾಹಿತಿ ನೀಡಿ ಸಂಘದ ಬೆಳವಣಿಗೆಗೆ ಕಾರಣರಾದ ಸದಸ್ಯರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು. ಸದಸ್ಯರ ಸರ್ವಾನುಮತ ಅಭಿಪ್ರಾಯದಂತೆ ತಾಲೂಕಿನ ಕರಾಯ, ಮಡಂತ್ಯಾರು ಅಥವಾ ಪೂಂಜಾಲಕಟ್ಟೆಯಲ್ಲಿ ಸ್ಥಳ ಸಮೀಕ್ಷೆ, ಪರಾಮರ್ಶೆ ನಡೆಸಿ ಶಾಖೆ ತೆರೆಯಲು ನಿರ್ಧರಿಸಲಾಗುವುದು ಎಂದರು. ಸದಸ್ಯರು ತಮ್ಮ ಅಭಿಪ್ರಾಯ, ಸಲಹೆಗಳನ್ನು ಮಂಡಿಸಿದರು.
ಇದೇ ಸಂದರ್ಭದಲ್ಲಿ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 41 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಎಸ್. ಹರಿಪ್ರಸಾದ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶೋಭಾ ಸುರೇಶ್ ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನಿತರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸಂಘದ ಸದಸ್ಯರು ಸಂಘದ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದರ ಜತೆಗೆ ಇತರರನ್ನೂ ಸದಸ್ಯರನ್ನಾಗಿ ಸೇರ್ಪಡೆಗೊಳಿಸಿ ವ್ಯವಹಾರ ಅಭಿವೃದ್ಧಿಪಡಿಸಬೇಕೆಂದರು.
ಸಂಘದ ಉಪಾಧ್ಯಕ್ಷ ನಾಗೇಶ್ ರಾವ್ ಮುಂಡ್ರುಪ್ಪಾಡಿ, ನಿರ್ದೇಶಕರಾದ ರಾಮಭಟ್ ಅಲೆವೂರಾಯ, ಲಕ್ಷ್ಮೀನಾರಾಯಣ ಭಟ್, ನಾರಾಯಣ ಭಟ್, ಶ್ರೀನಿವಾಸ ಮುಚ್ಚಿಂತ್ತಾಯ, ಚಂದ್ರಶೇಖರ ಭಟ್, ಶೋಭಾ ಸುರೇಶ್ ಮತ್ತು ವಿಜಯಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ಜಿ.ಎಂ. ಮಹಾಸಭೆಯ ನಡವಳಿಕೆಯನ್ನು ನಿರ್ವಹಿಸಿ, ವಾರ್ಷಿಕ ವರದಿ, ಜಮಾ ಖರ್ಚು-ಲಾಭ-ನಷ್ಟ – ಆಡಿಟ್ ವರದಿ ಮಂಡಿಸಿ ಸಭೆ ಅನುಮೋದಿಸಿತು. ಸಂಘದ ಅಧ್ಯಕ್ಷ ಗಂಗಾಧರ ರಾವ್ ಕೆವುಡೇಲು ಸ್ವಾಗತಿಸಿ ಚಂದ್ರಶೇಖರ ಭಟ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.